images-16.jpeg
Spread the love

ಕುಂದಾಪುರ: ದಿನಾಂಕ:23-12-2025(ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಗ್ರಾಮದ ನಿವಾಸಿ ಮಹಿಳೆಯೋರ್ವರ ಪರಿಚಯದ ವ್ಯಕ್ತಿ ಗಳು ತಮಗೆ ಕಷ್ಟ ವಿದೆಯೆಂದು ನಂಬಿಸಿ ಅವರ ಚಿನ್ನಾಭರಣ ಪಡೆದು ಸಾಲ ಪಡೆದು ಆ ನಂತರ ವಾಪಸ್ ಕೇಳಿದಾಗ ಚಿನ್ನಾಭರಣ ಕೊಡದೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ , ಕೋಟೇಶ್ವರ ಗ್ರಾಮದ ನಿವಾಸಿ ಶ್ರೀಮತಿ ಮೈಮುನ್ನಿಸಾ (62) ಇವರು ಒಟ್ಟು 22 ½  ಪವನ ತೂಕದ ಚಿನ್ನಾಭರಣವನ್ನು ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದು , ದೂರಿನಲ್ಲಿ 3 ನೇ ಆಪಾದಿತ ಶಾಗೀಲ್‌ ಎಂಬವನು ವಿದೇಶಕ್ಕೆ ಹೋಗಲು ಹಣದ ಸಮಸ್ಯೆ ಇದೇ ಎಂದು ಶ್ರೀಮತಿ ಮೈಮುನ್ನಿಸಾ ರ ಬಳಿ ಹೇಳಿ 2023 ನೇ ವರ್ಷದಲ್ಲಿ  7 ಪವನ ಚಿನ್ನವನ್ನು ಪಡೆದುಕೊಂಡಿರುತ್ತಾನೆ. ಹಾಗೂ ದಿನಾಂಕ 12/03/2024 ರಂದು 1 ನೇ ಆಪಾದಿತ ರೆಹನಾ ಶ್ರೀಮತಿ ಮೈಮುನ್ನಿಸಾ ರ ಬಳಿ  ತನಗೆ ಕಷ್ಟ ಇದೇ  ಎಂದು ಹೇಳಿ  15 ½ ಪವನ್‌ ಚಿನ್ನವನ್ನು ಪಡೆದಿರುತ್ತಾನೆ. ದಿನಾಂಕ 23/06/2025 ರಂದು ಶ್ರೀಮತಿ ಮೈಮುನ್ನಿಸಾ ರವರು ತಾನು ನೀಡಿದ ಚಿನ್ನಾಭರಣವನ್ನು ವಾಪಾಸು ಕೊಡುವಂತೆ ಆರೋಪಿತರುಗಳಲ್ಲಿ ಕೇಳಿದಾಗ ಅವರು ಕೊಲೆ ಬೆದರಿಕೆ ಹಾಕಿರುತ್ತಾರೆ. ಎರಡನೇ ಆಪಾದಿತ ಮೊಹಮ್ಮದ್‌ ಸಲೀಮ್‌ ಎಂಬವನು ಶ್ರೀಮತಿ ಮೈಮುನ್ನಿಸಾ ರವರಿಗೆ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: ‌ 318(1) ,318(2) , 316(1) 351.R/W 111.3(5 )BNS ರಂತೆ ಪ್ರಕರಣ ದಾಖಲಾಗಿದೆ.

error: No Copying!