istockphoto-2219303196-612x612.jpg
Spread the love

ಕುಂದಾಪುರ: ದಿನಾಂಕ :22/12/2025 (ಹಾಯ್ ಉಡುಪಿ ನ್ಯೂಸ್) ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೊನಿ ಬಳಿಯ ಸರಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಮೂವರು ವ್ಯಕ್ತಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಚಂದ್ರಕಲಾ ಎಮ್ ಪತ್ತಾರ ಅವರು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಚಂದ್ರಕಲಾ ಮ ಪತ್ತಾರ ಅವರು ದಿನಾಂಕ :20-12-2025 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ರಾತ್ರಿ  ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೊನಿ ಹತ್ತಿರದ ಸರಕಾರಿ ಹಾಡಿಯಲ್ಲಿ  ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಮೇರೆಗೆ  ದಾಳಿ ನಡೆಸಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ 1) ರಾಕೇಶ್ (24) 2) ಮ್ಯಾಕ್ಸಿ ರೋಶನ್‌ (39) 3) ಸತೀಶ್‌ (37) ಎಂಬ ಮೂವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಪ್ರಕಾಶ , ರಾಜೇಶ್‌ ಮತ್ತು ಸುಜನ್‌ ಎಂಬವರು ಓಡಿ ಹೋಗಿರುತ್ತಾರೆ. ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಹಣ 4,450/- ರೂಪಾಯಿ, 2) ಇಸ್ಪೀಟ್ ಎಲೆಗಳು 52. 3) ಹಳೆಯ ನ್ಯೂಸ್‌ ಪೇಪರ್ ನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!