ಮಣಿಪಾಲ: ದಿನಾಂಕ :19-12-2025(ಹಾಯ್ ಉಡುಪಿ ನ್ಯೂಸ್) ಬೊಮ್ಮರಬೆಟ್ಟು ಗ್ರಾಮದಲ್ಲಿ ಜಾಗದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ತನಗೆ ಮತ್ತು ತನ್ನ ಮಗನಿಗೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಹುಸೇನ್ ಶೇಖ್ ಅಹ್ಮದ್ ಎಂಬವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ,ಬೊಮ್ಮರಬೆಟ್ಟು ಗ್ರಾಮದ ನಿವಾಸಿ ಹುಸೇನ್ ಶೇಖ್ ಅಹ್ಮದ್ (72) ಹಾಗೂ ಆರೋಪಿತರುಗಳಾದ ಮೊಹಮ್ಮದ್ ರಪೀಕ್ , ಮೊಹಮ್ಮದ್ ಅಶ್ರಫ್,ಮೊಹಮ್ಮದ್ ಸಾಜೀಕ್ ಇವರಿಗೆ ಜಾಗದ ವಿಚಾರದಲ್ಲಿ ಬೊಮ್ಮರಬೆಟ್ಟು ಗ್ರಾಮದಲ್ಲಿ ಗಲಾಟೆ ಆಗಿ ನಂತರ ಚಿಕಿತ್ಸೆ ಬಗ್ಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹುಸೇನ್ ಶೇಖ್ ಅಹ್ಮದ್ ಹಾಗೂ ಅವರ ಮಗ ಹೋಗಿದ್ದಾಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಎದುರು ಆರೋಪಿತರುಗಳಾದ ರಪೀಕ್ , ಅಶ್ರಫ್,ಸಾಜೀಕ್ ಮತ್ತು ಅಶ್ರಪ್ ನ ಕಾರು ಡ್ರೈವರ್ ಸೇರಿ ತಡೆಹಿಡಿದು ಹುಸೇನ್ ಶೇಖ್ ಅಹ್ಮದ್ ರಿಗೆ ಮತ್ತು ಅವರ ಮಗನಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹುಸೇನ್ ಶೇಖ್ ಅಹ್ಮದ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 126(2),352,351,115(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
