gettyimages-154948457-612x612.jpg
Spread the love

ಕುಂದಾಪುರ: ದಿನಾಂಕ:14-12-2025(ಹಾಯ್ ಉಡುಪಿ ನ್ಯೂಸ್) ಬಾಲಕನೋರ್ವನಿಗೆ ಹಲ್ಲೆ ನಡೆಸಿ ಆತನ ಅಪ್ಪ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ತಲ್ಲೂರು ಗ್ರಾಮದಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ನಿವಾಸಿ ಪವನ್‌ (13) ಎಂಬಾತನು ದಿನಾಂಕ 05/12/2025 ರಂದು ಸಂಜೆ   ಶಾಲೆ ಬಿಟ್ಟು ಮನೆಗೆ ಬರುತ್ತಿರುವಾಗ ಮೈದಾನದ ಹತ್ತಿರ ತಮ್ಮಯ್ಯ ಎಂಬವನು  ಬಾಲಕ ಪವನ್ ನನ್ನು ಅಡ್ಡಗಟ್ಟಿ , ತಲೆಗೆ ಮತ್ತು ಕೆನ್ನೆಗೆ ಕೈಯಿಂದ ಹೊಡೆದು ನಿನ್ನ ಅಪ್ಪನಿಗೆ ಹೋಗಿ ಹೇಳು ಮೊದಲಿನ ಕೇಸು ವಾಪಾಸ್ಸು ತೆಗೆಯಬೇಕು ಇಲ್ಲದಿದ್ದರೆ ನಿನ್ನ ಅಪ್ಪನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕ ಪವನ್ ನೀಡಿದ ದೂರಿನಂತೆ  ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ 126(2), 115(2),351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!