ಮಲ್ಪೆ: ದಿನಾಂಕ: 04-12-2025(ಹಾಯ್ ಉಡುಪಿ ನ್ಯೂಸ್) ಕಲ್ಮಾಡಿ ಬೊಬ್ಬರ್ಯ ಪಾದೆಯ ಶ್ರೀ ಲಕ್ಷ್ಮೀ ಗಣಪತಿ ದೇವಸ್ಥಾನದಲ್ಲಿ ಕಳ್ಳರು ಕಾಣಿಕೆ ಡಬ್ಬಿ ಕಳ್ಳತನ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.
ಉಡುಪಿ ತಾಲೂಕು ಕೊಡವೂರು ಗ್ರಾಮದ ಕಲ್ಮಾಡಿ ಬೊಬ್ಬರ್ಯಪಾದೆ ಶ್ರೀ ಲಕ್ಷ್ಮಿಗಣಪತಿ ದೇವಸ್ಥಾನದ ಮೇಲ್ವಿಚಾರಕರಾಗಿದ್ದು, ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಮಾತ್ರ ಪೂಜಾ ಕಾರ್ಯ ನಡೆಯುತ್ತದೆ. ದಿನಾಂಕ 02/12/2025 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 03/12/2025 ರಂದು ಬೆಳಿಗ್ಗೆ 06:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಶ್ರೀ ಲಕ್ಷ್ಮಿಗಣಪತಿ ದೇವಸ್ಥಾನದ ಬಾಗಿಲಿನ ಚಿಲಕದ ಕೊಂಡಿ ಒಡೆದು, ದೇವಸ್ಥಾನದಲ್ಲಿದ್ದ ಅಂದಾಜು ರೂ. 7,000/- ಹಣ ಇರುವ 2 ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಶಿವಳ್ಳಿ ಗ್ರಾಮದ ಕಡಿಯಾಳಿ ಕಾತ್ಯಾಯಿನಿ ನಗರದ ನಿವಾಸಿ ಯು.ಉಮೇಶ್ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:341(1) ,341(4) .305 BNS ರಂತೆ ಪ್ರಕರಣ ದಾಖಲಾಗಿದೆ.
