ಮಣಿಪಾಲ: ದಿನಾಂಕ:26-11-2025(ಹಾಯ್ ಉಡುಪಿ ನ್ಯೂಸ್) ಐಸಿಐಸಿಐ ಬ್ಯಾಂಕ್ ನ ಏಜೆಂಟ್ ಎಂದು ನಂಬಿಸಿ ಮೊಬೈಲ್ ಕರೆ ಮಾಡಿದ ವ್ಯಕ್ತಿ ಮೊಬೈಲ್ ಹ್ಯಾಕ್ ಮಾಡಿ 3.71 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಶಿವಳ್ಳಿ ಗ್ರಾಮದ ರಾಯಲ್ ಎಂಬಾಸ್ಸಿ ಅಪಾರ್ಟ್ಮೆಂಟ್ ನಿವಾಸಿ ಡಾ. ಎನ್ ಶ್ವೇತಾ ರೆಡ್ಡಿ ಪ್ರಾಯ: 28 ವರ್ಷ ಎಂಬವರು ಮಣಿಪಾಲ ಕಸ್ತೂರ್ಬಾ ಕಾಲೇಜಿನಲ್ಲಿ ತೃತೀಯ ವರ್ಷದ MD ವಿದ್ಯಾಬ್ಯಾಸ ಮಾಡಿಕೊಂಡಿದ್ದು ದಿನಾಂಕ:18.11.2025 ರಂದು ಮದ್ಯಾಹ್ನ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ರಾಯಲ್ ಎಂಬಾಸ್ಸಿ ಆಪಾರ್ಟ್ಮೆಂಟ್ ರಲ್ಲಿ ಇರುವಾಗ 7074136042 ನಂಬರಿನಿಂದ ICICI ಬ್ಯಾಂಕಿನ ಏಜೆಂಟ್ ಎಂದು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷನ್ ಸರ್ವಿಸ್ನಿಂದ ನಿಮ್ಮ ಕಾರ್ಡ್ ಪ್ರೋಟೆಕ್ಷಷನ್ ಸರ್ವಿಸ್ Expire ಆಗಿದೆ ಎಂದು ತಿಳಿಸಿದ್ದು ಡಾ.ಎನ್ ಶ್ವೇತಾ ರೆಡ್ಡಿ ಯವರು ಬೇಡ ಎಂದು ತಿಳಿಸಿದಾಗ ಪುನಃ ಕರೆ ಮಾಡಿ Google ನಲ್ಲಿ I Mobile Lite App ಎಂದು ಸರ್ಚ್ ಮಾಡುವಂತೆ ತಿಳಿಸಿದ್ದು ಶ್ವೇತಾ ರೆಡ್ಡಿ ಯವರು ಸರ್ಚ್ ಮಾಡಿದ್ದು ನಂತರ ಶ್ವೇತಾ ರೆಡ್ಡಿ ಯವರ ಮೊಬೈಲ್ ಹ್ಯಾಕ್ ಆಗಿದ್ದು ನಂತರ 8100146420 ನೇ ನಂಬರಿಗೆ ಶ್ವೇತಾ ರೆಡ್ಡಿ ಯವರ ನಂಬರ್ Forword ಆಗಿ ಶ್ವೇತಾ ರೆಡ್ಡಿ ಯವರ Savings Account ನಿಂದ ಹಾಗೂ ಕ್ರೆಡಿಟ್ ಕಾರ್ಡ್ ನಿಂದ 3,70,944/- ರೂ ಹಣವನ್ನು ಶ್ವೇತಾ ರೆಡ್ಡಿ ಯವರಿಗೆ ತಿಳಿಯದಂತೆ ಮೋಸದಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಡಾ. ಶ್ವೇತಾ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:66(c) 66(d) IT Act & 316(2) 318(4) BNS ರಂತೆ ಪ್ರಕರಣ ದಾಖಲಾಗಿದೆ.
