ಮಲ್ಪೆ: ದಿನಾಂಕ:26-11-2025(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರಿಗೆ ನಾಲ್ವರು ವ್ಯಕ್ತಿಗಳು ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ, ಮಲ್ಪೆ ನಿವಾಸಿ ಸನತ್ ಸಾಲಿಯಾನ್ (44), ಎಂಬವರಿಗೆ ದಿನಾಂಕ 18/11/2025 ರಂದು ಬೆಳಿಗ್ಗೆ ಅಶೋಕ್ ಪುತ್ರನ್ ಹಾಗೂ ಶೇಖರ್ ಪುತ್ರನ್ ಎಂಬವರ ಮೊಬೈಲ್ ಸಂಖ್ಯೆಯಿಂದ ನಿರಂತವಾಗಿ ಬೆದರಿಕೆ ಕರೆ ಬಂದಿದ್ದು ಸನತ್ ಸಾಲಿಯಾನ್ ಕರೆಯನ್ನು ಸ್ವೀಕರಿಸಿದಾಗೆಲ್ಲಾ ಆರೋಪಿತರಾದ 1.ಅಶೋಕ್ ಪುತ್ರನ್, 2.ದೇವದಾಸ್ ಪುತ್ರನ್, 3.ಶೇಖರ್ ಪುತ್ರನ್, 4.ಧನಂಜಯ್ ಪುತ್ರನ್ ಇವರು ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸನತ್ ಸಾಲಿಯಾನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:35̧2, 351(2) BNS ರಂತೆ ಪ್ರಕರಣ ದಾಖಲಾಗಿದೆ.
