ಉಡುಪಿ: ದಿನಾಂಕ:25-11-2025(ಹಾಯ್ ಉಡುಪಿ ನ್ಯೂಸ್) ಯೂಟ್ಯೂಬ್ ನಲ್ಲಿ ಜಾಹೀರಾತು ನೋಡಿ ಅಪರಿಚಿತರೊಂದಿಗೆ ವ್ಯವಹಾರ ನಡೆಸಿದ ವ್ಯಕ್ತಿ ಯೋರ್ವರು ಒಂದು ಲಕ್ಷ ರೂಪಾಯಿ ಕಳೆದು ಕೊಂಡಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಿವಾಸಿ ಲಕ್ಷ್ಮೀಶ ಎಂಬವರು ದಿನಾಂಕ 02/09/2025 ರಂದು ತನ್ನ ಅಂಗಡಿಯಲ್ಲಿರುವಾಗ ಅಂಗಡಿಗೆ Display rack ನ ಅವಶ್ಯಕತೆವಿರುವುದರಿಂದ ಈ ಬಗ್ಗೆ ಅನ್ ಲೈನ್ ಸೋಷಿಯಲ್ ಮೀಡಿಯಾ ಯೂಟ್ಯೂಬ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ IG Enterprises ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಕಡಿಮೆ ದರದಲ್ಲಿ Display rack ಜಾಹೀರಾತನ್ನು ನೋಡಿ ಅದರಲ್ಲಿದ್ದ ಮೊಬೈಲ್ ನಂಬರ್ ನ್ನು ಪಡೆದು ಸಂಪರ್ಕಿಸಿದ ನಂತರ ಯಾರೋ ಅಪರಿಚಿತ ವ್ಯಕ್ತಿಯು ಲಕ್ಷ್ಮೀಶ ರವರ ವಾಟ್ಸಪ್ ಗೆ ವೆಬ್‌ಸೈಟ್ ಲಿಂಕ್ ಮತ್ತು Rack Catalogue list ನ್ನು ಕಳುಹಿಸಿದ್ದಾನೆ.
ಲಕ್ಷ್ಮೀಶರವರು ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅವರಿಗೆ ಬೇಕಾದ Display rack ನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ದಿನಾಂಕ 01/10/2025 ರಂದು ಆರೋಪಿಯು ಫೋನ್ ಕರೆ ಮಾಡಿ Display rack ನ ಪಡೆಯಲು ಮುಂಗಡ ಹಣವನ್ನು ಕಳುಹಿಸುವಂತೆ ಹೇಳಿದ್ದು, ಅದಕ್ಕೆ ಲಕ್ಷ್ಮೀಶ ರವರು ಅದೇ ದಿನ ಆರೋಪಿಯು ನೀಡಿದ ಬ್ಯಾಂಕ್ ಖಾತೆಗೆ ನೆಫ್ಟ್ ಮುಖಾಂತರ 49,000/- ರೂಪಾಯಿಗಳನ್ನು ಮತ್ತು ದಿನಾಂಕ : 11/11/2025 ರಂದು ಉಳಿದ 51,192/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದು, ಇದಾದನಂತರ ಆರೋಪಿಯು ಯಾವುದೇ Display rack ನ್ನು ಕಳುಹಿಸದೇ ಇದ್ದು ಹಾಗೂ ನೀಡಿದ ಹಣವನ್ನು ಹಿಂದಿರುಗಿಸದೇ ಆನ್ ಲೈನ್ ನಲ್ಲಿ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4) BNS 66(D) IT act ರಂತೆ ಪ್ರಕರಣ ದಾಖಲಾಗಿದೆ.
