IMG_20251125_233059.jpg
Spread the love

ಬೈಂದೂರು: ದಿನಾಂಕ:25-11-2025(ಹಾಯ್ ಉಡುಪಿ ನ್ಯೂಸ್) ರಸ್ತೆ ಬದಿಯಲ್ಲಿ ಬೆಳೆದಿರುವ ಪೊದೆ ತೆರವುಗೊಳಿಸಲು ಪಂಚಾಯತ್ ಗೆ ದೂರು ನೀಡಿರುವ ಬಗ್ಗೆ ಸಿಟ್ಟಿಗೆದ್ದ ಸ್ಥಳೀಯ ನಿವಾಸಿ ಯೋರ್ವ ದೂರು ನೀಡಿದವರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಪಡುವರಿ ಗ್ರಾಮದಲ್ಲಿ ನಡೆದಿದೆ.

ಬೈಂದೂರು ಪಡುವರಿ ಗ್ರಾಮದ ನಿವಾಸಿ ಮಣಿಕಂಠ (28)ಎಂಬವರ ಮನೆಗೆ ಹೋಗುವ ಆರೋಪಿತ ಗಣಪತಿ ಅಕ್ಕಿ ಮನೆಯ ಮುಂಭಾಗದಲ್ಲಿನ ಪಟ್ಟಣ ಪಂಚಾಯತ್‌ ರಸ್ತೆಯ ಬದಿಯಲ್ಲಿ ಬೆಳೆದಿರುವ ಗಿಡ ಬಲ್ಲೆಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಈ ಗಿಡಬಲ್ಲೆಗಳನ್ನು ಕಡಿಯಲು ಅರ್ಜಿ ಸಲ್ಲಿಸಿದ್ದು ಪಂಚಾಯತ್‌ ಅಧಿಕಾರಿಯವರು ಸ್ಥಳಕ್ಕೆ ಬಂದು ಆರೋಪಿತರಲ್ಲಿ ರಸ್ತೆಯ ಅಂಚಿನಲ್ಲಿ ಕೂಡಿಟ್ಟ ಕೆಂಪು ಕಲ್ಲನ್ನು ತೆರವು ಮಾಡಲು ತಿಳಿಸಿ ಹೋಗಿದ್ದು ಈ ದೂರು ಕೊಟ್ಟ ವಿಚಾರದಿಂದ ಮಣಿಕಂಠರವರ ಮೇಲೆ ಸಿಟ್ಟುಗೊಂಡಿದ್ದ ಆರೋಪಿತರಾದ 1.ಗಣಪತಿ ಅಕ್ಕಿ , 2. ವಿಜಯಲಕ್ಷ್ಮೀ ಇವರು ದಿನಾಂಕ 21/11/2025 ರಂದು ಸಂಜೆ  ಮಣಿಕಂಠ ರವರು ತನ್ನ ತಮ್ಮ ಶಬರೀಶ್‌ನೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಮನೆ ಕಡೆಗೆ ಹೋಗುತ್ತಿದ್ದಾಗ ಆರೋಪಿಗಳು ಮಣಿಕಂಠ ರವರಿಗೆ ಹಲ್ಲೆ ಮಾಡುವ ಉದ್ದೇಶದಿಂದ ಕಬ್ಬಿಣದ ಹಾರುಗೋಲನ್ನು ಮಣಿಕಂಠ ರವರ ಕಡೆಗೆ ಎಸೆದಿದ್ದು ಇದರಿಂದ ಮಣಿಕಂಠ ರವರ ಬಲಕಾಲಿನ ಹಸ್ತಕ್ಕೆ ಮತ್ತು ಹೊಟ್ಟೆಯ ಭಾಗಕ್ಕೆ ನೋವಾಗಿ ಕುಂದಾಪುರ ಸರಕಾರಿ ಆಸತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ .

ಮಣಿಕಂಠ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 118 (1) ಜೊತೆಗೆ 3̈(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!