ಉಡುಪಿ: ದಿನಾಂಕ:21-11-2025(ಹಾಯ್ ಉಡುಪಿ ನ್ಯೂಸ್) ಫೇಸ್ ಬುಕ್ ನಲ್ಲಿ ಜಾಹೀರಾತು ಲಿಂಕ್ ಒಂದನ್ನು ಒತ್ತಿ ಮಹಿಳೆ ಯೋರ್ವರು 2.44 ಲಕ್ಷ ರೂಪಾಯಿ ಕಳೆದು ಕೊಂಡ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಕುಂಜಿಬೆಟ್ಟು ನಿವಾಸಿ ಗಾಯತ್ರಿ (67) ಎಂಬವರು ದಿನಾಂಕ : 17/11/2025 ರಂದು ಫೇಸ್ ಬುಕ್ ನ್ನು ನೋಡುತ್ತಿದ್ದಾಗ ಲೈಫ್ ಇನ್ಸುರೆನ್ಸ್ ಸರ್ಟಿಫಿಕೇಟ್ ನವೀಕರಿಸುವ ಬಗ್ಗೆ ಜಾಹೀರಾತನ್ನು ನೋಡಿದ್ದು, ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಪ್ ಗೆ ಎಪಿಕೆ ಫೈಲ್ ಬಂದಿರುತ್ತದೆ ಅದನ್ನು ತೆರೆದು ಇನ್ಸ್ಟಾಲ್ ಮಾಡಿದ್ದು ಇದಾದ ಕೆಲವೇ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಗಾಯತ್ರಿ ರವರಿಗೆ ಫೋನ್ ಕರೆಮಾಡಿ ಗಾಯತ್ರಿ ರವರ E-mail ID ನ್ನು ಪಡೆದುಕೊಂಡು ಗಾಯತ್ರಿ ರವರ ಗಮನಕ್ಕೆ ಬಾರದೇ ಅದೇ ದಿನ ರಾತ್ರಿ ಗಾಯತ್ರಿ ರವರ ಯೂನಿಯನ್ ಬ್ಯಾಂಕ್ ಖಾತೆ ಯಿಂದ ಕ್ರಮವಾಗಿ 1,70,000/- , 14,000/- ಮತ್ತು 60,000/- ಒಟ್ಟಾರೆಯಾಗಿ 244000/- ರೂಪಾಯಿಗಳನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ u/s (U/s-318(4)) BNS , 66(D) IT Act ರಂತೆ ಪ್ರಕರಣ ದಾಖಲಾಗಿದೆ.
