ಶಂಕರನಾರಾಯಣ: ದಿನಾಂಕ:21-11-2025(ಹಾಯ್ ಉಡುಪಿ ನ್ಯೂಸ್) ವಿವಾಹಿತ ಮಹಿಳೆಯೋರ್ವರು ಕುಡುಕ ಗಂಡ ನೀಡುತ್ತಿದ್ದ ಮಾನಸಿಕ ದೈಹಿಕ ಹಿಂಸೆಯಿಂದ ಬೇಸತ್ತು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಜ್ರಿ ಗ್ರಾಮದ ಹೊಳಂದೂರು ಹೆಬ್ಬಾಗಿಲು ಮನೆ ನಿವಾಸಿ ಶ್ರೀಮತಿ ಸುಜಾತ ಪ್ರಾಯ 34 ವರ್ಷ ಎಂಬವರು ದಿನಾಂಕ 23-05-2013 ರಂದು ಕಮಗೊಳ್ಳಿ ತೊಂಬತ್ತು ನಿವಾಸಿಯಾದ ದಿ.ಸಂಜೀವ ಶೆಟ್ಟಿ ಎಂಬುವವರ ಮಗನಾದ ಸಂತೋಷ್ ಶೆಟ್ಟಿ ಎಂಬುವವರೊಂದಿಗೆ ಮದುವೆಯಾಗಿದ್ದು, ಮದುವೆಯ ಬಳಿಕ 2 ವರ್ಷ ಶ್ರೀಮತಿ ಸುಜಾತರವರು ಗಂಡನ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು.
ಆ ಸಮಯ ಶ್ರೀಮತಿ ಸುಜಾತರವರ ಗಂಡ ಮನೆಯಲ್ಲಿ ವಿನಾ ಕಾರಣ ಕುಡಿದು ಬಂದು ಸುಜಾತ ರವರೊಂದಿಗೆ ಗಲಾಟೆ ಮಾಡಲು ಪ್ರಾರಂಭಿಸಿದ್ದು, ಸುಜಾತ ರವರು 2 ಹೆಣ್ಣು ಮಕ್ಕಳೊಂದಿಗೆ ಅವರ ತಂದೆ ಮನೆಗೆ ಬಂದು ವಾಸ ಮಾಡಿಕೊಂಡಿದ್ದು ನಂತರ ಸುಜಾತ ರವರ ತಂದೆ ಮನೆಗೂ ತನ್ನ ಗಂಡನಾದ ಸಂತೋಷ್ ಶೆಟ್ಟಿಯು ವಿಪರೀತ ಶರಾಬು ಕುಡಿದುಕೊಂಡು ಬಂದು ಸುಜಾತ ರವರಿಗೆ ಕೈಯಿಂದ ಹೊಡೆದು ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ಸುಜಾತ ರವರು 3 ಬಾರಿ ಶಂಕರನಾರಾಯಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಪೊಲೀಸರು ಸಂತೋಷ್ ಶೆಟ್ಟಿಯವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಮುಂದಕ್ಕೆ ತೊಂದರೆ ನೀಡದಂತೆ ತಿಳುವಳಿಕೆ ನೀಡಿದರೂ ಸಹ ಆತನು ಪುನ; ಗಲಾಟೆ ಮಾಡುತ್ತಿದ್ದು, ನಂತರ ಗಂಡನ ಮಾನಸಿಕ ಹಾಗೂ ದೈಹಿಕ ಹಿಂಸೆ ತಡೆಯಲು ಆಗದೇ ಅಡಕೆ ಮರಕ್ಕೆ ಉಪಯೋಗಿಸುವ ವಿಷ ಪಧಾರ್ಥವನ್ನು ಸೇವಿಸಿದ್ದು, ಇದನ್ನು ತಿಳಿದ ಸುಜಾತ ರವರ ಮಗಳು ಮತ್ತು ಅಕ್ಕನೊಂದಿಗೆ ತೊಂಬತ್ತಿನ ರಿಕ್ಷಾವೋಂದರಲ್ಲಿ ಕರೆದು ಕೊಂಡು ಬಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಸುಜಾತ ರವರ ಗಂಡ ಸಂತೋಷ್ ಶೆಟ್ಟಿಯು ಸುಜಾತ ರವರು ಮನೆಯಲ್ಲಿ ಹಾಗೂ ಗಂಡನ ಮನೆಯಲ್ಲಿ ಇರುವಾಗ ಅವಾಚ್ಯ ಶಬ್ಧಗಳಿಂದ ಬೈದು, ಕೈಯಿಂದ ಹೊಡೆದು, ಮನೆ ಬಿಟ್ಟು ಹೋಗು ಎಂದು ಬೆದರಿಕೆ ಹಾಕಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ಆಸ್ಪತ್ರೆಯ ಲ್ಲಿ ದಾಖಲಾಗಿರುವ ಸುಜಾತ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 85,115(2) 352, 351(2)BNS ರಂತೆ ಪ್ರಕರಣ ದಾಖಲಾಗಿದೆ.
