ಕಲ್ಯಾಣಪುರ: ದಿನಾಂಕ:19-11-2025 (ಹಾಯ್ ಉಡುಪಿ ನ್ಯೂಸ್)
ಇತ್ತೀಚೆಗೆ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ರವರು ನಡೆಸಿದ 22 ನೇ ಕೆ ಬಿ ಐ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಮುತ್ತುರಾಜ್ ಎಸ್ ಪೂಜಾರಿ ಅವರು ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ, ಇವರು ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಕಲ್ಯಾಣಪುರದ ವಿದ್ಯಾರ್ಥಿಯಾಗಿದ್ದು ಇವರು ಬುಡೋಕನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಕರ್ನಾಟಕ ಉಡುಪಿ ಇದರ ಮುಖ್ಯ ಶಿಕ್ಷಕರಾದ ರಕ್ಷಿತ್ ಡಿ ಕೋಟ್ಯಾನ್ ಹಾಗೂ ದೀಕ್ಷಿತ್ ಡಿ ಕೋಟ್ಯಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

