ಮಲ್ಪೆ: ದಿನಾಂಕ:14-11-2025(ಹಾಯ್ ಉಡುಪಿ ನ್ಯೂಸ್) ಹನುಮಾನ್ ನಗರದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಎಂಟು ಜನರನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್ ಕುಮಾರ್ ಡಿ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್ ಕುಮಾರ್ ಡಿ ಅವರು ದಿನಾಂಕ: 13/11/2025 ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಹನುಮಾನ್ ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಠಾಣೆಯ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದಾಗ ಸಾರ್ವಜನಿಕ ಖಾಲಿ ಸ್ಥಳದಲ್ಲಿ 7-8 ಜನರು ನ್ಯೂಸ್ ಪೇಪರ್ ಹಾಸಿಕೊಂಡು ಕುಳಿತುಕೊಂಡಿದ್ದು, ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ 8 ಜನ ಆರೋಪಿತರುಗಳಾದ 1.ಉಮೇಶ್ ,2.ಸಿದ್ರಾಮೇಶ,3.ಹನುಮೇಶ,4.ಮಲ್ಲಿಕಾರ್ಜುನ ಹಡಪದ,5.ಶಿವಪ್ಪ ಸರದಾರ,6.ವಿರೂಪಾಕ್ಷ,7.ಬಸವರಾಜ ,8.ಜಗದೀಶ ಎಂಬವರನ್ನು ಬಂಧಿಸಿದ್ದಾರೆ.
ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸ್ವತ್ತುಗಳಾದ, ಹಳೆ ನ್ಯೂಸ್ ಪೇಪರ್-3, 52 ಇಸ್ಪೀಟ್ ಎಲೆಗಳು, ನಗದು ಹಣ ರೂ.5,860/- ಮತ್ತು VIVO ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 3,000/-, SAMSUNG ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 2,500/-, VIVO ಮೊಬೈಲ್ ಫೋನ್ -1, ಅಂದಾಜು ಮೌಲ್ಯ ರೂ.2,000/- 4.ಕೆಂಪು ಬಣ್ಣದ Honda Activa ಕಂಪೆನಿಯ ಸ್ಕೂಟರ್ KA 26 EB 8057 ಅಂದಾಜು ಮೌಲ್ಯ ರೂ 15,000/- ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 87 kp Act ರಂತೆ ಪ್ರಕರಣ ದಾಖಲಾಗಿದೆ.
