ಕಾಪು: ದಿನಾಂಕ:14-11-2025 (ಹಾಯ್ ಉಡುಪಿ ನ್ಯೂಸ್) ಚಂದ್ರನಗರದ ನಿವಾಸಿಯೋರ್ವ ಹಾಗೂ ಇನ್ನಿಬ್ಬರು ಅಕ್ರಮವಾಗಿ ಮನೆಯ ಅಂಗಳಕ್ಕೆ ಪ್ರವೇಶಿಸಿ ಮನೆಯಲ್ಲಿದ್ದ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಲ್ಲಾರು ಗ್ರಾಮದ ಕೋಟೆ ರೋಡ್ ನಿವಾಸಿ ಅಸ್ಮ ಪ್ರಾಯ 37 ವರ್ಷ ಎಂಬವರು ಅವರ ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ಅವರು ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು ಅಸ್ಮಾ ರವರಿಗೆ ಪರಿಚಯ ಇರುವ ಚಂದ್ರನಗರದ ವಾಸಿ ಯೂನುಸ್ ಹಾಗೂ ಅಸ್ಮಾ ರವರ ಮಗ ಮೊಹಮ್ಮದ್ ಹರ್ಷಿದ್ ಗೆಳೆಯರಾಗಿದ್ದು, ದಿನಾಂಕ 12-11-2025 ರಂದು ರಾತ್ರಿ ಸಮಯಕ್ಕೆ ಯೂನುಸ್ ಹಾಗೂ ಆತನ ಜೊತೆ ಇಬ್ಬರು ವ್ಯಕ್ತಿಗಳು ಒಂದು ಸ್ಕೂಟಿಯಲ್ಲಿ ಅಸ್ಮಾ ರವರ ಮನೆಯ ಅಂಗಳಕ್ಕೆ ಬಂದು ಮನೆಯ ಬಾಗಿಲಿಗೆ ಕೈಯಿಂದ ಬಡಿದು ಅಸ್ಮಾ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಬಾಗಿಲು ತೆರೆಯಿರಿ ಇಲ್ಲದಿದ್ದರೆ ಬಾಗಿಲನ್ನು ಒಡೆದು ಒಳಗೆ ಬಂದು ಎಲ್ಲರನ್ನು ಸಾಯಿಸುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದು, ಬಂದ ಮೂರು ಜನರು ನಮ್ಮಲ್ಲಿ ಇನ್ನೂ ಜನರಿದ್ದಾರೆಂದು ನಮ್ಮನ್ನು ಬೆದರಿಸಿ ಅವರು ಬಂದ ಸ್ಕೂಟಿಯಲ್ಲಿ ಹೋಗಿರುತ್ತಾರೆ ಎಂದು ಅಸ್ಮಾ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 329, 351(1)(2)(3), 352, 79 BNS ರಂತೆ ಪ್ರಕರಣ ದಾಖಲಾಗಿದೆ.
