IMG_20251111_223829.jpg
Spread the love

ಕೊಲ್ಲೂರು: ದಿನಾಂಕ:11-11-2025(ಹಾಯ್ ಉಡುಪಿ ನ್ಯೂಸ್) ಬೆಳ್ಳಾಲ ಗ್ರಾಮದ ನಿವಾಸಿ ರಣಧೀರ ಎಂಬವರ ಮನೆಯ ಅಂಗಳಕ್ಕೆ ನುಗ್ಗಿದ ಅಣ್ಣಪ್ಪ ಶೆಟ್ಟಿ ಎಂಬವ ಜೀವ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ದೂರು ದಾಖಲಾಗಿದೆ.

ದಿನಾಂಕ 10/11/2025 ರಂದು ಮಧ್ಯಾಹ್ನ ಹೊತ್ತಿಗೆ  ಕುಂದಾಪುರ ತಾಲೂಕಿನ, ಬೆಳ್ಳಾಲ ಗ್ರಾಮದ ಹಕ್ಲಜಡ್ಡು, ನೂಜು ಬಂಡ್ರಾಡಿ ಎಂಬಲ್ಲಿ, ಆಪಾದಿತ ಅಣ್ಣಪ್ಪ ಶೆಟ್ಟಿ  ಎಂಬವನು ಕೈಯಲ್ಲಿ ಚೂರಿ ಹಿಡಿದುಕೊಂಡು  ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ನಿವಾಸಿ ರಣಧೀರ (41) ಎಂಬವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ  ಶಬ್ದಗಳಿಂದ  ಬೈದು, ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ರಣಧೀರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 329 (3), 352, 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!