ಬ್ರಹ್ಮಾವರ: ದಿನಾಂಕ:11-11-2025(ಹಾಯ್ ಉಡುಪಿ ನ್ಯೂಸ್) ಜಾತಬೆಟ್ಟು ನಿವಾಸಿ ಯೋರ್ವರು ಪಾರ್ಸೆಲ್ ಕೊರಿಯರ್ ಟ್ರಾಕ್ ಸ್ಟೇಟಸ್ ಅನ್ನು ಚೆಕ್ ಮಾಡುವಾಗ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನರ್ನಾಡು,ಜಾತಬೆಟ್ಟು ನಿವಾಸಿ ಬಾಲಾಜಿ ಸ್ವಾಮಿನಾಥನ್ (43) ಎಂಬವರು ದಿನಾಂಕ 07/11/2025 ರಂದು ಬೆಳಿಗ್ಗೆ 10:20 ಗಂಟೆಯಿಂದ ಬೆಳಿಗ್ಗೆ 11:15 ಗಂಟೆಯ ಮಧ್ಯೆ ಅವರಿಗೆ ಬರುವ Parcel ನ Courier Track Status ಅನ್ನು Online ನಲ್ಲಿ ಚೆಕ್ ಮಾಡುವಾಗ ಕರೆ ಮಾಡಿ ಮಾತನಾಡಿದ ಸೈಬರ್ ಅಪರಾಧಿಗಳು ಬಾಲಾಜಿ ಸ್ವಾಮಿನಾಥನ್ ಅವರ SBI Credit Card Number ದಿಂದ ಒಟ್ಟು ರೂ 61,464/ ಹಣವನ್ನು ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿದೆ.
