ಕಾರ್ಕಳ: ದಿನಾಂಕ:08-11-2025(ಹಾಯ್ ಉಡುಪಿ ನ್ಯೂಸ್) ನವವಿವಾಹಿತ ಯುವತಿಯೋರ್ವಳು ಗಂಡನ ಜೊತೆಗೆ ತಾಯಿ ಮನೆಗೆ ಬಂದವಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕಾರ್ಕಳ ಈದು ಗ್ರಾಮದ ನಿವಾಸಿ ಶರ್ಮೀಳಾ ಎ.ಸಿ (25) ಎಂಬವರು ದಿನಾಂಕ 29/10/2025 ರಂದು ವಸಂತ ಬಿ ಎಂಬವರನ್ನು ಗುರುಹಿರಿಯರ ಸಮ್ಮಖದಲ್ಲಿ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಮದುವೆಯಾಗಿದ್ದು ಮದುವೆಯಾದ ನಂತರ ಗಂಡನ ಜೊತೆ ಗಂಡನ ಮನೆಯಲ್ಲಿದ್ದರು ಎನ್ನಲಾಗಿದೆ.
ದಿನಾಂಕ 06/11/2025 ರಂದು ಗಂಡನ ಜೊತೆ ತಾಯಿ ಮನೆಯಾದ ಈದು ಗ್ರಾಮಕ್ಕೆ ಬಂದಿದ್ದು, ನಂತರ ದಿನಾಂಕ 07/11/2025 ರಂದು ಗಂಡ ಮತ್ತು ತಾಯಿಯ ಜೊತೆ ನಾರಾವಿ , ಕಟೀಲು ದೇವಸ್ಥಾನಗಳಿಗೆ ಹೋಗಿ ಬಂದಿದ್ದು , ಸಂಜೆ ಸಮಯಕ್ಕೆ ಹೊಸ್ಮಾರು ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಾರದೇ ಕಾಣೆಯಾಗಿದ್ದು ಅವರ ಮೊಬೈಲ್ ಫೋನ್ ಸ್ವಿಚ್ಆಫ್ ಆಗಿದೆ ಎಂದು ದೂರು ದಾಖಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿದೆ.
