IMG20251108143813.jpg
Spread the love

ಶಿರ್ವ: ದಿನಾಂಕ:08-11-2025(ಹಾಯ್ ಉಡುಪಿ ನ್ಯೂಸ್) ಕಟಪಾಡಿಯಿಂದ ಶಂಕರಪುರ ಆಗಿ ಶಿರ್ವ ಸಂಪರ್ಕಿಸುವ ಮುಖ್ಯ ರಸ್ತೆಯು ಹೊಂಡಮಯವಾಗಿದ್ದು ವಾಹನ ಸವಾರರು ಜೀವ ಭಯದಿಂದಲೇ ಈ ರಸ್ತೆಯಲ್ಲಿ ವಾಹನ ಚಲಾಯಿಸುವಂತಾಗಿದೆ.

ಶಂಕರಪುರ ದಿಂದ ಮುಂದೆ ಬಂಟಕಲ್ಲು ದಾಟಿದ ನಂತರವಂತೂ ರಸ್ತೆಯಲ್ಲಿ ಡಾಮಾರೇ ಇಲ್ಲವಾಗಿದ್ದು ಜೆಲ್ಲಿ ಕಲ್ಲು ಗಳು ಎದ್ದು ಬಂದು ಧೂಳು ಮತ್ತು ಹೊಂಡದಿಂದ ದ್ವಿಚಕ್ರ ವಾಹನ ಚಾಲಕರು ಎದ್ದು ಬಿದ್ದು ಅಪಾಯದಲ್ಲಿ ವಾಹನ ಚಲಾಯಿಸುತ್ತಿದ್ದಾರೆ .

ರೋಗಿಗಳನ್ನಂತೂ ತುರ್ತು ಸೇವೆಗೆ ಈ ರಸ್ತೆಯಲ್ಲಿ ಕರೆದೊಯ್ಯುವಂತಿಲ್ಲ.ಗರ್ಭಿಣಿಯರೇನಾದರೂ ಈ ರಸ್ತೆಯಲ್ಲಿ ಸಂಚರಿಸುವವರಾದರೆ ಅವಧಿಗೂ ಮುನ್ನವೇ ಹೆರಿಗೆ ಭಾಗ್ಯ ಈ ರಸ್ತೆಯಲ್ಲೇ ಲಭ್ಯ.

ಈ ರಸ್ತೆಯಲ್ಲಿ ಸಂಚರಿಸುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ದುರವಸ್ಥೆ ಕಣ್ಣಿಗೆ ಕಾಣುವುದಿಲ್ಲವೇ? ಅಥವಾ ಈ ರಸ್ತೆಯಲ್ಲಿ ಬಿದ್ದು ಜನರು ಸಾಯುವವರೆಗೆ ಕಾಯುತ್ತಿದ್ದೀರೆ? ಉಡುಪಿ ಜಿಲ್ಲಾಧಿಕಾರಿಗಳಾದರೂ ಈ ರಸ್ತೆಯಲ್ಲಿ ಸಂಚರಿಸಿ ಈ ರಸ್ತೆಗೆ ತುರ್ತು ಡಾಮರೀಕರಣ ಕಾಮಗಾರಿ ಕೈಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: No Copying!