IMG_20251109_205848.jpg
Spread the love

ಕಾಫು: ದಿನಾಂಕ:09-11-2025(ಹಾಯ್ ಉಡುಪಿ ನ್ಯೂಸ್) ಫಕಿರಣಕಟ್ಟೆಯ ಮಹಿಳೆಯೋರ್ವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾಗ ಅಲ್ಲಿ ಸ್ನೇಹ ಬೆಳೆಸಿದ್ದ ವ್ಯಕ್ತಿಯೋರ್ವ ಊರಿಗೆ ಬಂದು ಆಕೆಯನ್ನು ಮದುವೆಯಾದ ನಾಲ್ಕೇ ದಿನಕ್ಕೆ ಆಕೆಯ ಚಿನ್ನಾಭರಣ ಹಾಗೂ ವಾಹನ ತೆಗೆದು ಕೊಂಡು ಹೋದವನು ಈಗ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.

ಕಾಪು, ಫಕಿರಣಕಟ್ಟೆ ನಿವಾಸಿ ಫಾಮಿದಾ ಬಾನು (30) ಎಂಬವರು ಪ್ರಸ್ತುತ ಉಡುಪಿಯ  ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಮೂಡಬಿದ್ರೆಯ ಬೆಳ್ವಾಯಿಯ ನಿವಾಸಿಯಾದ ಮೊಹಮ್ಮದ್‌ ಶಕೀಲ್‌ ಎಂಬವರೊಂದಿಗೆ ವಿವಾಹ ಮಾಡಿಕೊಂಡಿದ್ದು, ನಂತರ ಇಬ್ಬರ ನಡುವೆ ವೈಮಸ್ಸು ಉಂಟಾಗಿ ವಿಚ್ಚೇದನವಾಗಿರುತ್ತದೆ ಎನ್ನಲಾಗಿದೆ .

ನಂತರ ಫಾಮಿದಾ ಬಾನು ರವರು 2022 ನೇ ಇಸವಿಯಲ್ಲಿ ಕೆಲಸಕ್ಕೆಂದು ಸೌದಿಗೆ ಹೋಗಿದ್ದು, ಅಲ್ಲಿ ಸಯ್ಯದ್‌ ಅಪ್ರಿದ್‌ ಎಂಬವರ ಪರಿಚಯ ಆಗಿದ್ದು ,ಫಾಮಿದಾ ಬಾನುರವರು ಅವನಲ್ಲಿ ತನಗೆ ಮದುವೆಯಾಗಿ ವಿಚ್ಚೇದನವಾಗಿರುವ ವಿಚಾರ ಹಾಗೂ 3 ಜನ ಮಕ್ಕಳಿರುವ ವಿಚಾರವನ್ನು ತಿಳಿಸಿದ ಮೇಲೆ ಅವನು ಫಾಮಿದಾ ಬಾನು ರವರನ್ನು ಮದುವೆಯಾಗಿದ್ದನು ಎಂದು ತಿಳಿಸಿರುತ್ತಾರೆ.

2023 ನೇ ಇಸವಿಯಲ್ಲಿ ಸಯ್ಯದ್‌ ಅಪ್ರಿದ್‌ ಫಾಮಿದಾಬಾನುರವರ ಮನೆಗೆ ಬಂದು 2 ದಿನ ವಾಸವಾಗಿದ್ದು, ಆತನೊಂದಿಗೆ ತಿರುಗಾಡಲು ಕರೆದುಕೊಂಡು ಹೋಗುತ್ತಿದ್ದು, ಅಲ್ಲದೇ ಮಕ್ಕಳ ಖರ್ಚಿಗೆ ಹಣವನ್ನು ಸಹ ನೀಡುತ್ತಿದ್ದು, ಬಳಿಕ ವಿದೇಶಕ್ಕೆ ಹೋಗಿ ಬಂದು ಮದುವೆಯಾಗುವುದಾಗಿ ತಿಳಿಸಿರುತ್ತಾನೆ. ಮದುವೆಗೆ ಸಯ್ಯದ್‌ ಅಪ್ರಿದ್‌ ರವರ ಮನೆಯವರ ತೀವ್ರ ವಿರೋಧವಿದ್ದುದರಿಂದ ಎಲ್ಲವನ್ನು ಸರಿ ಮಾಡಿಕೊಂಡು ಮದುವೆಯಾಗುವುದಾಗಿ ತಿಳಿಸಿದ್ದು, ದಿನಾಂಕ:23-10-2025 ರಂದು ಸಯ್ಯದ್‌ ಅಪ್ರಿದ್‌ ನು ವಿದೇಶದಿಂದ ನೇರವಾಗಿ ಫಾಮಿದಾ ಬಾನು ರವರ ಮನೆಗೆ ಬಂದು ನಾವಿಬ್ಬರು ಮದುವೆಯಾಗುವ ಎಂದು ತಿಳಿಸಿ ದಿನಾಂಕ 24/10/2025 ರಂದು ಮುಸ್ಲೀಂ ಸಂಪ್ರದಾಯದಂತೆ ಮದುವೆಯಾಗಿರುತ್ತಾನೆ ಎಂದಿದ್ದಾರೆ.

ಮದುವೆಯಾದ 4 ದಿನ ಮಾತ್ರ ಮನೆಯಲ್ಲಿದ್ದು, ನಂತರ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಅವರನ್ನು ನೋಡಿಕೊಂಡು ಎಲ್ಲವನ್ನು ವಿವರಿಸಿ ಬರುವುದಾಗಿ ಹೇಳಿ ಫಾಮಿದಾ ಬಾನು ರವರಿಗೆ ಸೇರಿದ ಕೆಎ-19-ಪಿ-5982 ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಅಲ್ಲದೆ ತನ್ನ ಬಳಿ ಈಗ ಹಣ ಇಲ್ಲ, ನಿನ್ನ ಬಳಿ ಇರುವ ಚಿನ್ನವನ್ನು ನೀಡುವಂತೆ ಕೇಳಿದ್ದು, ಅದರಂತೆ ಫಾಮಿದಾ ಬಾನು ರವರು ತನ್ನ 5 ಪವನ್‌ ಚಿನ್ನದ ಸರವನ್ನು ಸಯ್ಯದ್‌ ಅಪ್ರಿದ್‌ಗೆ ನೀಡಿದ್ದು ಅದನ್ನು ತೆಗೆದುಕೊಂಡು ಹೋಗಿರುತ್ತಾನೆ ಎಂದೂ ,ಆದರೆ ಆತ ಮನೆಬಿಟ್ಟು ಹೋದ ನಂತರ ಈಗ ಫಾಮಿದಾ ಬಾನು ರವರ ಯಾವುದೇ ಸಂಪರ್ಕಕ್ಕೆ ಸಿಗದೇ, ಪೋನ್ ಕರೆ ಮಾಡಿದರೂ ಸಹಾ ಪೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದಿದ್ದಾರೆ.

ಸಯ್ಯದ್‌ ಅಪ್ರಿದ್‌ ರವರ ತಾಯಿ ನಾಸಿರಾ, ತಮ್ಮ ಆದಿಲ್, ಆತನ ತಾಯಿಯ ತಂಗಿಯಾದ ಅಸ್ಮಾ, ರುಬೇನಾ, ಆತನ ಸಂಬಂಧಿ ಹೈದರ್, ಮೂಸ, ರವರು ಫಾಮಿದಾ ಬಾನು ರವರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಆತನನ್ನು ಬಿಡು, ನೀನು ಬೇರೆ ಮದುವೆಯಾಗು, ಇಲ್ಲದಿದ್ದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮನ್ನು ಹೇಗೆ ಬೇರೆ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫಾಮಿದಾ ಬಾನು ರವರನ್ನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ನಂಬಿಸಿ ಮದುವೆಯಾಗಿ ಈಗ ಫಾಮಿದಾ ಬಾನು ರವರ ಕಾರು ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದಾರೆ ಎಂದು ಫಾಮಿದಾ ಬಾನು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 318, 318(2), 352 ರಂತೆ ಪ್ರಕರಣ ದಾಖಲಾಗಿದೆ.

error: No Copying!