ಮಣಿಪಾಲ: ದಿನಾಂಕ:07-11-2025(ಹಾಯ್ ಉಡುಪಿ ನ್ಯೂಸ್) ಅಪ್ರಾಪ್ತ ಬಾಲಕಿಯರನ್ನು ಪ್ರೀತಿ ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ನಂತರ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅವರ ಮಾನದ ಜೊತೆಚೆಲ್ಲಾಟವಾಡುತ್ತಿದ್ದ ಮಾನಗೆಟ್ಟ ಹಲ್ಕಾ ಯುವಕನೋರ್ವ ಮಣಿಪಾಲದ ಲಾಡ್ಜ್‌ನಲ್ಲಿ ಅಪ್ರಾಪ್ತ ಬಾಲಕಿಯ ಜೊತೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಿನ್ನೆ ನಡೆದಿದೆ.
ಮಣಿಪಾಲದ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿಯ ಜೊತೆ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ ಕಟಪಾಡಿಯ ಬಿಜೆಪಿ ಮುಖಂಡ ನೋರ್ವನ ಪುತ್ರ ಎನ್ನಲಾಗಿದೆ. ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (20) ಎಂಬವ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಪುಸಲಾಯಿಸಿ ಮಣಿಪಾಲದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ . ಇದರ ಮಾಹಿತಿಯನ್ನು ಬಾಲಕಿಯ ಪೋಷಕರಿಗೆ ಯಾರೋ ನೀಡಿದ್ದು ಬಾಲಕಿಯ ಪೋಷಕರು ನೇರವಾಗಿ ಲಾಡ್ಜ್‌ಗೆ ಪೊಲೀಸರೊಂದಿಗೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿ ಶ್ರೀಶಾಂತ್ ಲಾಡ್ಜ್ ನಲ್ಲಿ ಬಾಲಕಿಯ ನಕಲಿ ಆಧಾರ್ ಕಾರ್ಡ್ ನೀಡಿ ಕರೆದುಕೊಂಡು ಹೋಗಿದ್ದು, ಆತನ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಇನ್ನೋರ್ವ ಬಾಲಕಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ನನಗೂ ಶ್ರೀಶಾಂತ್ ಮದುವೆ ಆಗುವುದಾಗಿ ನಂಬಿಸಿ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಬಹುಮುಖಿ ಕ್ರಿಮಿನಲ್ ಪ್ರತಿಭೆಯ! ಶ್ರೀಶಾಂತ್ ಪೂಜಾರಿ ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
