IMG_20251107_101859.jpg
Spread the love

ಕಾರ್ಕಳ: ದಿನಾಂಕ:07-11-2025 (ಹಾಯ್ ಉಡುಪಿ ನ್ಯೂಸ್) ನೂರಾಳ್ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 06/11/2025 ರಂದು  ನುರಾಳ್‌ ಬೆಟ್ಟು ಕ್ರಾಸ್‌ ಬಳಿ ನೂರಾಳ್‌ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ KA-19-AC-3530 ನೇ ನಂಬ್ರದ ಪಿಕಪ್‌ ವಾಹನದಲ್ಲಿ ಅದರ ಚಾಲಕ ಜೀವಿತ್‌ ಮತ್ತು ಈದು ಗ್ರಾಮದ ಪ್ರಶಾಂತ್‌ ಎಂಬವರು ಜೊತೆಯಾಗಿ  ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೇ ಈದು ಗ್ರಾಮದ ಕುಡ್ಯೆ ಎಂಬಲ್ಲಿಂದ ಸುಮಾರು 1 ಯುನಿಟ್ ಮರಳನ್ನು ಕಳವು ಮಾಡಿ ಪಿಕಪ್‌ ನಲ್ಲಿ ಸಾಗಾಟ ಮಾಡುತ್ತಿದ್ದಾಗ ಕಾರ್ಕಳ ಗ್ರಾಮಾಂತರ ಪೊಲೀಸರು ಈರ್ವರನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), 112(1) R/w 3(5) ಮತ್ತು ಕಲಂ: 66 R/W 192(A) IMV ACT ರಂತೆ ಪ್ರಕರಣ ದಾಖಲಾಗಿದೆ.

error: No Copying!