images-14.jpeg
Spread the love

ಉಡುಪಿ: ದಿನಾಂಕ:10-11-2025(ಹಾಯ್ ಉಡುಪಿ ನ್ಯೂಸ್) ಪತ್ನಿ ಯೇ ಗಂಡನ ಗಮನಕ್ಕೆ ತಾರದೆ ಲಾಕರ್ನಲ್ಲಿ ಗಂಡ ಇರಿಸಿದ್ದ ಚಿನ್ನಾಭರಣ ಹಾಗೂ ದಸ್ತಾವೇಜುಗಳನ್ನು ತೆಗೆದು ಕೊಂಡು ಹೋಗಿ ಮೋಸ ಮಾಡಿದ್ದಾಳೆ ಎಂದು ಗಂಡ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಮಾರುತ್ ನಾರಾಯಣ ಪೈ(55) ಎಂಬವರು ಉಡುಪಿಯ ಇನ್ಸುರೆನ್ಸ್‌  ಲಿಮಿಟೆಡ್‌ ಕಂಪನಿಯೊಂದರಲ್ಲಿ  ಪ್ರಾದೇಶಿಕ ವ್ಯವಸ್ಥಾಪಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾರುತ್ ನಾರಾಯಣ ಪೈರವರು ಹಾಗೂ ಅವರ ಹೆಂಡತಿ ಲಕ್ಷ್ಮೀ ರವರು ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಮಾರುತಿ ವಿಥೀಕಾ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಲಾಕರ್‌ ನ್ನು ನಿರ್ವಹಣೆ ಮಾಡುವ ಬಗ್ಗೆ ಲಾಕರ್‌  ನ್ನು ಹೊಂದಿದ್ದರು ಎನ್ನಲಾಗಿದೆ.

ಮಾರುತ್ ನಾರಾಯಣ ಪೈ ರವರು 830ಗ್ರಾಂ ಚಿನ್ನಾಭರಣ  100 ಗ್ರಾಂ ತೂಕದ 10 ಬೆಳ್ಳಿ ನಾಣ್ಯಗಳು, ಐದು ಲಕ್ಷ ಮೌಲ್ಯದ ಸ್ಥಿರ ಠೇವಣಿ ದಸ್ತಾವೇಜು ಹಾಗೂ ಮಣಿಪಾಲದಲ್ಲಿರುವ ಮನೆಯ ಮೂಲ ದಾಖಲಾತಿ ದಸ್ತಾವೇಜುಗಳನ್ನು ಲಾಕರ್‌ ನಲ್ಲಿ ಇಟ್ಟಿದ್ದು  ಮಾರುತ್ ನಾರಾಯಣ ಪೈ ರವರು ಲಾಕರ್‌ ನಲ್ಲಿ ಚಿನ್ನಾಭರಣಗಳನ್ನು ಇಟ್ಟ ನಂತರ ಒಂದೂ ಬಾರಿಯೂ ಲಾಕರ್‌ ನ್ನು ಉಪಯೋಗಿಸಿರುವುದಿಲ್ಲ ಎಂದಿದ್ದಾರೆ .

ಮಾರುತ್ ನಾರಾಯಣ ಪೈರವರಿಗೆ ಬಂದ ಮೂಲಗಳ ಪ್ರಕಾರ ಹೆಂಡತಿ ಲಕ್ಷ್ಮೀ ರವರು 18/08/2020 ರಲ್ಲಿ ಲಾಕರ್‌ ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ದಸ್ತಾವೇಜುಗಳನ್ನು ತೆಗೆದಿರುತ್ತಾರೆ ಹಾಗೂ ಅದೇ ತಿಂಗಳಿನಲ್ಲಿ ಗದಗದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಶಾಖೆಯಲ್ಲಿ ಹೊಸ ಲಾಕರ್‌ ನ್ನು ತೆರೆದಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಎಂದಿದ್ದಾರೆ. ಮಾರುತ್ ನಾರಾಯಣ ಪೈರವರಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ಲಕ್ಷ್ಮೀ ರವರು ಬ್ಯಾಂಕ್‌ ಲಾಕರ್‌ ನಲ್ಲಿಟ್ಟ ಚಿನ್ನಾಭರಣ ಮತ್ತು ದಸ್ತಾವೇಜುಗಳನ್ನು ಮಾರುತ್ ನಾರಾಯಣ ಪೈರ ಗಮನಕ್ಕೆ ಬಾರದೇ ತೆಗೆದು ಕೊಂಡು ವಾಪಸ್ಸು ನೀಡಿರುವುದಿಲ್ಲವೆಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಮಾರುತ್ ನಾರಾಯಣ ಪೈ ಅವರು ನೀಡಿದ  ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ:314,316(4),318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!