ಮಣಿಪಾಲ: ದಿನಾಂಕ :07-11-2025 (ಹಾಯ್ ಉಡುಪಿ ನ್ಯೂಸ್) ಅನಂತನಗರದ ರಾಯಲ್ ಹೆರಿಟೇಜ್ ಬಿಲ್ಡಿಂಗ್ ನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದಾಗ ಕೆಲಸಗಾರನೋರ್ವ 5ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದು ಕಟ್ಟಡದ ಮಾಲೀಕರ ನಿರ್ಲಕ್ಷ್ಯ ದಿಂದ ಈ ಅಪಘಾತ ಸಂಭವಿಸಿದೆ ಎಂದು ಕೆಲಸಗಾರರು ದೂರು ದಾಖಲಿಸಿದ್ದಾರೆ.
ಉಡುಪಿ,ಬಡಗುಬೆಟ್ಟು ಗ್ರಾಮದ ನಿವಾಸಿ ಅರುಣ್ (28) ಹಾಗೂ ಸ್ನೇಹಿತ ರಾಕೇಶ್ ಎಂಬುವವರು ದಿನಾಂಕ 03/11/2025 ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಅನಂತನಗರ ಸೋನಿಯಾ ಕ್ಲೀನಿಕ್ ಬಳಿ ಇರುವ ರಾಯಲ್ ಹೆರಿಟೇಜ್ ಬಿಲ್ಡಿಂಗ್ ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿರುವಾಗ ಬಿಲ್ಡಿಂಗ್ ನ ಬಿಲ್ಡರ್ ಅನ್ಸರ್ ಎಂಬುವವರು 5 ನೇ ಮಹಡಿಯಲ್ಲಿ ಪೈಂಟಿಂಗ್ ಮಾಡುವಂತೆ ತಿಳಿಸಿದ್ದು ಅರುಣರವರು ಹಾಗೂ ರಾಕೇಶ್ ಪೈಂಟಿಂಗ್ ಮಾಡುತ್ತಿರುವಾಗ ಮದ್ಯಾಹ್ನ ಸುಮಾರಿಗೆ ರಾಕೇಶ ಕುಳಿತಿದ್ದ ಜೂಲಾದ ಹಗ್ಗವು ಏಕಾಏಕಿಯಾಗಿ ತುಂಡಾಗಿ ರಾಕೇಶನು 5 ನೇ ಮಹಡಿಯಿಂದ ಕೆಳಗೆ ನೆಲಕ್ಕೆ ಬಿದ್ದು ಆತನ ತಲೆಗೆ ಕಾಲಿಗೆ ಕೈಗೆ ಹಾಗೂ ಇತರ ಕಡೆ ಪೆಟ್ಟಾಗಿ ಪ್ರಜ್ಞಾಹೀನನಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದಾರೆ ಎನ್ನಲಾಗಿದೆ.
ಬಿಲ್ಡಿಂಗ್ ನ ಬಿಲ್ಡರ್ ಅನ್ಸರ್ ಹಾಗೂ ಬಿಲ್ಡಿಂಗ್‌ನ ಅಧ್ಯಕ್ಷ ಲತೀಫ್ ಹಾಗೂ ಇತರರು ಪೈಂಟಿಂಗ್ ಕೆಲಸ ಮಾಡಿಸುವಾಗ ಮೇಲಿನಿಂದ ಕೆಳಗೆ ಬಿದ್ದರೆ ಪ್ರಾಣಕ್ಕೆ ಅಪಾಯ ಆಗುತ್ತದೆ ಎಂದು ತಿಳಿದರೂ ಕೂಡ ಮುಂಜಾಗ್ರತ ಕ್ರಮವನ್ನು ಕೈಗೊಳ್ಳದೇ ತೀರಾ ನಿರ್ಲಕ್ಷತನವನ್ನು ಮಾಡಿದ್ದಾರೆ ಎಂದು ಅರುಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅರುಣ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 125(b) BNS ರಂತೆ ಪ್ರಕರಣ ದಾಖಲಾಗಿದೆ.
