ಕಾರ್ಕಳ: ದಿನಾಂಕ:08-11-2025(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ನಿವಾಸಿ ಮಹಿಳೆಯೋರ್ವರ ಪರಿಚಯದ ಈರ್ವರು ವ್ಯಕ್ತಿಗಳು ಅವರ ಚಿನ್ನಾಭರಣ ಪಡೆದು ಕೊಂಡು ಅದರ ಮೇಲೆ ಸಾಲ ಪಡೆದು ವಂಚಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳ ಕಸಬಾ ಗ್ರಾಮದ ನಿವಾಸಿ ರುಭೀನಾ ಭಾನು(44) ಎಂಬವರಿಂದ ಆರೋಪಿತರಾದ 1.ಸಯ್ಯದ್ ಯುನೀಸ್ (57), ಹಿರ್ಗಾನ ಗ್ರಾಮ ಕಾರ್ಕಳ, 2.ಸಯ್ಯದ್ ಸುಹೇಲ್ (25), ಹಿರ್ಗಾನ ಗ್ರಾಮ ಕಾರ್ಕಳ ಎಂಬವರು ರುಬೀನಾ ಭಾನುರವರನ್ನು ನಂಬಿಸಿ 2020 ನೇ ಇಸವಿಯಲ್ಲಿ 17,86,200/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪಡೆದುಕೊಂಡು ಅದನ್ನು ರಾಜಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕುಕ್ಕುಂದೂರು ಶಾಖೆ ಹಾಗೂ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘ ಕಾರ್ಕಳ ಶಾಖೆಯಲ್ಲಿ ಅಡವು ಇರಿಸಿ ಚಿನ್ನದ ಆಭರಣಗಳನ್ನು ನಂತರ ಬಿಡಿಸಿಕೊಡುವುದಾಗಿ ಹೇಳಿದ್ದು ಆದರೆ ಆರೋಪಿಗಳು ಅಡವು ಮಾಡಿದ ಚಿನ್ನದ ಆಭರಣಗಳನ್ನು ವಾಪಾಸು ಬಿಡಿಸಿಕೊಡದೇ ಮೋಸ ಮಾಡಿದ್ದಾರೆ ಎಂದು ರುಭೀನಾ ಬಾನು ಅವರು ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 403, 406, 420 BNS ರಂತೆ ಪ್ರಕರಣ ದಾಖಲಾಗಿದೆ.
