IMG-20230719-WA00161.jpg
Spread the love

ಉಡುಪಿ: ದಿನಾಂಕ:05-11-2025(ಹಾಯ್ ಉಡುಪಿ ನ್ಯೂಸ್) ಕಲ್ಸಂಕ -ಗುಂಡಿಬೈಲು ರಸ್ತೆಯಲ್ಲಿ 407ವಾಹನದಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಉಡುಪಿ ನಗರ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಪರಮೇಶ್ವರ್ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಪರಮೇಶ್ವರ್ ಅವರು  ದಿನಾಂಕ 04/11/2025 ರಂದು ಠಾಣೆಯ ಸಿಬ್ಬಂದಿ ಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಲ್ಸಂಕ-ಗುಂಡಿಬೈಲು ಕಡೆಗೆ ಬರುತ್ತಿದ್ದ KA-20 D-4947 ನೋಂದಣಿ ಸಂಖ್ಯೆಯ ಟಿಪ್ಪರ್  407 ವಾಹನವನ್ನು ಡಿ-ಮಾರ್ಟ್ ಎದುರು ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಅವಿನಾಶ್ ಎಂಬುದಾಗಿ ಹಾಗೂ ಟಿಪ್ಪರ್ ನ ಮಾಲಕನೂ ಕೂಡ ಆಗಿರುತ್ತೇನೆ ಎಂದು ಹೇಳಿರುತ್ತಾನೆ ಎನ್ನಲಾಗಿದೆ.

ಪೊಲೀಸರು ಟಿಪ್ಪರ್ ನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 150 ಕೆಂಪು ಕಲ್ಲನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಟಿಪ್ಪರ್ ಚಾಲಕನ ಬಳಿ ವಿಚಾರಿಸಿದಾಗ ಆತನು ಕೂಲಿ ಆಳುಗಳ ಸಹಾಯದಿಂದ ಬಂಟಕಲ್ಲು ಮನೆಯ ಬಳಿಯಿಂದ ಟಿಪ್ಪರ್ ನಲ್ಲಿ ಕೆಂಪು ಕಲ್ಲುಗಳನ್ನು ಲೋಡ್ ಮಾಡಿಕೊಂಡು ಉಡುಪಿಯ ಗುಂಡಿಬೈಲು ಬಳಿಯಿರುವ ಮನೆಯೊಂದಕ್ಕೆ ಸಾಗಾಟ ಮಾಡುತ್ತಿರುವುದಾಗಿ ಹೇಳಿರುತ್ತಾನೆ.

ಟಿಪ್ಪರ್ ಚಾಲಕನ ಬಳಿ ಸಾಗಾಟ ಮಾಡಲು ಪರವಾನಿಗೆಯನ್ನು ಹೊಂದಿದ್ದೀರ ಎಂದು ವಿಚಾರಿಸಿದಾಗ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದು ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಕಾರಣ ಪೊಲೀಸರು ಆತನನ್ನು ಬಂಧಿಸಿ ಟಿಪ್ಪರ್ ಹಾಗೂ ವಾಹನದಲ್ಲಿದ್ದ ಅಂದಾಜು 7,000/- ರೂಪಾಯಿ ಮೌಲ್ಯದ ಸುಮಾರು 150 ಕೆಂಪುಕಲ್ಲನ್ನು  ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 303(2) BNS, ಜೊತೆಗೆ 4(1-A),21(4) MMRD act ರಂತೆ ಪ್ರಕರಣ ದಾಖಲಾಗಿದೆ.

error: No Copying!