ಕುಂದಾಪುರ: ದಿನಾಂಕ: 04-11-2025(ಹಾಯ್ ಉಡುಪಿ ನ್ಯೂಸ್) ಕುಂದಾಪುರದ ಶ್ರೀ ರಾಮ್ ಫೈನಾನ್ಸ್ ನವರು ವಾಹನ ಸಾಲ ಕೇಳಿದ್ದ ವ್ಯಕ್ತಿ ಯೋರ್ವರಿಗೆ ವಂಚನೆ ನಡೆಸಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ವಾಹನ ಮಾಲಕರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು ತಾಲೂಕು,ಮುದೂರು ಗ್ರಾಮದ ನಿವಾಸಿ ಪಿ ಪಿ ಜೋಷ್ (57)ಎಂಬವರು ಜನವರಿ 2024 ರಲ್ಲಿ ಕುಂದಾಪುರದ ಶ್ರೀ ರಾಮ್ ಫೈನಾನ್ಸ್ ಗೆ ಹೋಗಿ ಅಲ್ಲಿನ ಮ್ಯಾನೇಜರ್ ರವರಲ್ಲಿ ತನಗೆ ವಾಹನಬೇಕು ಎಂದು ಕೇಳಿದಾಗ ನಮ್ಮಲ್ಲಿ ಜಪ್ತಿ ಮಾಡಿದ 407 ಟೆಂಪೋ ಇದ್ದು ದಿನಾಂಕ 02/01/2025 ರಂದು ಏಲಂ ಮಾಡುವುದಾಗಿ ತಿಳಿಸಿದ್ದು ಅದರಂತೆ ಪಿ ಪಿ ಜೋಷ್ ರವರು ಮಂಗಳೂರು ಹೊಸಬೆಟ್ಟುವಿಗೆ ಹೋಗಿ ನೋಡಿದಾಗ ಅಲ್ಲಿದ್ದ KL-14-K3818 ನೇ 407 ಟೆಂಪೋ ವನ್ನು ಪಿ ಪಿ ಜೋಷ್ ರವರು ಆಯ್ಕೆ ಮಾಡಿರುತ್ತಾರೆ ಎನ್ನಲಾಗಿದೆ.
ವಾಹನವು 4,50,000/- ರೂಪಾಯಿಗೆ ಪಿ ಪಿ ಜೋಷ್ ರವರ ಹೆಸರಿಗೆ ಆಗಿರುತ್ತದೆ ಎನ್ನಲಾಗಿದೆ. ಶ್ರೀ ರಾಮ್ ಫೈನಾನ್ಸ್ ರವರು ಪಿಪಿ ಜೋಷ್ ರವರಿಗೆ ತಿಳಿಯದ ಹಾಗೇ 3,75,000/- ರೂಪಾಯಿ ಸಾಲದ ದಾಖಲೆಗಳಿಗೆ ಸಹಿ ಪಡೆದು ಸಾಲ ಮಂಜೂರು ಮಾಡಿರುತ್ತಾರೆ ಎಂದೂ ನಂತರ ಜುಲೈ 2024 ರಲ್ಲಿ ವಾಹನವನ್ನು ಕೊಂಡು ಹೋಗಲು ತಿಳಿಸಿರುತ್ತಾರೆ.
ಆಗ ಪಿ ಪಿ ಜೋಷ್ ರವರು ನನಗೆ ವಾಹನ ಬೇಡ ನಾನು ಕಟ್ಟಿದ ಹಣವನ್ನು ನನಗೆ ವಾಪಾಸ್ಸು ಕೊಡಿ ಎಂದು ಕೇಳಿದಾಗ ಫೈನಾನ್ಸ್ ನ ಮ್ಯಾನೇಜರ್ ಹಾಗೂ ಇಬ್ಬರು ಸಿಬ್ಬಂದಿಯವರು ಸೇರಿ ಪಿ ಪಿ ಜೋಷ್ ರವರಿಗೆ ಬೆದರಿಸಿ ವಾಹನ ಬೇರೆಯವರಿಗೆ ಮಾರಾಟವಾದ ಬಳಿಕ ಹಣ ವಾಪಾಸ್ಸು ನೀಡುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ .
ಪಿ ಪಿ ಜೋಷ್ ರವರು ಲೋನ್‌ಗೆ ಮುಂಗಡ 85,000/- ಹಣವನ್ನು ನೀಡಿದ್ದು ನಂತರ ಪಿ ಪಿ ಜೋಷ್ ರವರು ಮ್ಯಾನೇಜರ್ ರವರಲ್ಲಿ ಹಣದ ಬಗ್ಗೆ ವಿಚಾರಿಸಿದಾಗ ವಾಹನವು 2,80,000/- ಕ್ಕೆ ಮಾರಾಟವಾಗಿದ್ದು ಉಳಿದ ಸಾಲದ ಹಣ 1,96,000/- ಹಣ ಉಳಿಯುತ್ತದೆ ಕೂಡಲೇ ಕಟ್ಟಬೇಕು ಇಲ್ಲದಿದ್ದಲ್ಲಿ ಆರೇಸ್ಟ್ ಮಾಡುತ್ತೇವೆ ಎಂದು ಬೆದರಿಸಿದ್ದಕ್ಕೆ ಹೆದರಿ 75,000/- ಹಣವನ್ನು ಪಿ ಪಿ ಜೋಷ್ ರವರು ಕಟ್ಟಿರುತ್ತಾರೆ. ಉಳಿದ ಹಣವನ್ನು ಕಟ್ಟುವಂತೆ ಇದೀಗ ಬೆದರಿಸುತ್ತಿದ್ದಾರೆ. ಶ್ರೀ ರಾಮ್ ಫೈನಾನ್ಸ್ ರವರು ಪಿ ಪಿ ಜೋಷ್ ರವರಿಗೆ ವಾಹನವನ್ನು ನೀಡದೇ ಹೆಚ್ಚಿಗೆ ಹಣವನ್ನು ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪಿ ಪಿ ಜೋಷ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 318(4) 351(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.
