images-13.jpeg
Spread the love

ಗಂಗೊಳ್ಳಿ: ದಿನಾಂಕ: 04/11/2025 (ಹಾಯ್ ಉಡುಪಿ ನ್ಯೂಸ್) ಆಲೂರು ರಾಮ ಮಂದಿರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ ವೈ ಅವರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್‌ ಕುಮಾರ್‌ ಬಿ. ವೈ ರವರು ದಿನಾಂಕ : 03-11-2025 ರಂದು ಠಾಣೆಯ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಆಲೂರು ಗ್ರಾಮದ ಬೀಟ್‌ ಸಿಬ್ಬಂದಿ ರವರು ಪಿಎಸ್ಐ ರವರಿಗೆ ಕರೆ ಮಾಡಿ ಆಲೂರು ಗ್ರಾಮದ ಆಲೂರು ರಾಮ ಮಂದಿರದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನವೀನ ಎಂಬವನು ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬೀಟ್ ಸಿಬ್ಬಂದಿಯಿಂದ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳ ತಲುಪಿದಾಗ ಅಲ್ಲಿ  ನವೀನ ಪೂಜಾರಿ ಪ್ರಾಯ:52 ವರ್ಷ ವಾಸ:ಆಲೂರು ರಾಮ ಮಂದಿರ ಹತ್ತಿರ, ಆಲೂರು ಗ್ರಾಮ ಎಂಬಾತನು ಸಾರ್ವಜನಿಕರನ್ನು ಕರೆದು ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಕೂಗುತ್ತಾ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತ ಒಂದು ಹಾಳೆಯಲ್ಲಿ ಪೆನ್ನಿನಿಂದ ಬರೆದುಕೊಳ್ಳುತ್ತಾ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ತನ್ನ ಕಿಸೆಯಲ್ಲಿ ಹಾಕಿಕೊಳ್ಳುತ್ತಿದ್ದುದನ್ನು ಕಂಡು ಪೊಲೀಸರು ದಾಳಿ ನಡೆಸಿ ಆತನನನ್ನು ಬಂಧಿಸಿದ್ದಾರೆ.

ಆರೋಪಿ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು 1050/- ರೂ, ಮಟ್ಕಾ ಚೀಟಿ, ಬಾಲ್‌ ಪೆನ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. .ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ  U/s:78(1)(111) KP.ACT ರಂತೆ ಪ್ರಕರಣ ದಾಖಲಾಗಿದೆ.

error: No Copying!