unnamed-2.webp
Spread the love

ಕೊಲ್ಲೂರು: ದಿನಾಂಕ:04-11-2025(ಹಾಯ್ ಉಡುಪಿ ನ್ಯೂಸ್) ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಲ್ಲಿ ಯಾರೋ ನಕಲಿ ವೆಬ್ಸೈಟ್ ತೆರೆದು ದೇವಳದ ಭಕ್ತರಿಗೆ ವಂಚನೆ ನಡೆಸಿದ್ದಾರೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಶಾಂತ್ ಕುಮಾರ್ ಶೆಟ್ಟಿ ಎಂಬವರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದು, ದೇವಸ್ಥಾನದ ಅದಿಕೃತ ವೆಬ್‌ಸೈಟ್‌ ಆದ http://karnatakatemplesaccommodation.com ಬದಲಿಗೆ ಯಾರೋ ಅಪರಿಚಿತರು karnataka temple accommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್‌ಸೈಟ್‌ ನ್ನು ಅಕ್ರಮ ಲಾಭದ ಉದ್ದೇಶದಿಂದ ತೆರೆದು, ಹಲವಾರು ಜನರಿಗೆ ಈ ನಕಲಿ ವೆಬ್‌‌ಸೈಟ್‌ ಮೂಲಕ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿ ವಾಟ್ಸ್‌‌ಆಪ್‌‌‌ ತಂತ್ರಾಂಶದಲ್ಲಿ ಪೋನ್‌‌‌‌ ಪೇನ ಕ್ಯೂರ್‌ ಕೋಡ್‌‌‌‌‌‌‌‌‌‌‌‌‌‌ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ಶ್ರೀ ದೇವಳದ ಭಕ್ತರಿಗೆ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಬಗ್ಗೆ ವಂಚಿಸಿ ಹಣ ದೋಚುತ್ತಿದ್ದು ಈ ನಕಲಿ ವೆಬ್‌ಸೈಟ್‌ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ದೂರು ನೀಡಿದ್ದಾರೆ.

ಪ್ರಶಾಂತ್ ಕುಮಾರ್ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 66 © IT Act & 318 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!