ಕೋಟ: ದಿನಾಂಕ :24/10/2025 (ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ದಿನಾಂಕ :23-10-2025 ರಂದು ಸಾಯಂಕಾಲ ಠಾಣೆಯಲ್ಲಿದ್ದಾಗ ಕುಂದಾಪುರ ತಾಲೂಕು, ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿರುವ ಎಸ್.ಪಿ. ಕ್ರಿಯೇಶನ್ ಕ್ಲಬ್ ನಲ್ಲಿ ಸುಮಾರು ಗಂಡಸರು ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕ ಮಾಹಿತಿ ಬಂದಿದ್ದು ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದ ಸ್ಥಳದಲ್ಲಿ ನಗದು ಹಣ ರೂಪಾಯಿ 1,130/-, ಇಸ್ಪೀಟ್ ಎಲೆಗಳು, ಮೊಬೈಲ್ ಹ್ಯಾಂಡ್ ಸೆಟ್ ಗಳು- 7, ಪ್ಲಾಸ್ಟಿಕ್ ಚೇರ್ ಗಳು – 40 ರೌಂಡ್ ಟೇಬಲ್ ಗಳು -3, ಪ್ಲಾಸ್ಟಿಕ್ ಸ್ಟೂಲ್ ಗಳು – 5, ಟೇಬಲ್ ಗಳು-1, ಸಿಸಿ ಕ್ಯಾಮೇರಾ ಡಿವಿಆರ್ -1 ಮತ್ತು ಮೊನಿಟರ್ -1 ನ್ನು ಮತ್ತು ಕ್ಲಬ್ ನ ಲೆಜ್ಜರ್ ಗಳು -3 ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಆಪಾದಿತ 1)ಶ್ರೀನಿವಾಸ, ಪ್ರಾಯ 63 ವರ್ಷ, ಹಂಗಳೂರು ಗ್ರಾಮ, ಕುಂದಾಪುರ ತಾಲೂಕು 2) ಸೂರ್ಯ, ಪ್ರಾಯ 51 ವರ್ಷ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು 3)ಚಂದ್ರಹಾಸ, ಪ್ರಾಯ 40 ವರ್ಷ, ಅಂಬಾಗಿಲು, ಪುತ್ತೂರು, ಉಡುಪಿ 4) ಕೃಷ್ಣ, ಪ್ರಾಯ 46 ವರ್ಷ, ಬೀಜಾಡಿ ಗ್ರಾಮ, ಕೊಟೇಶ್ವರ , ಕುಂದಾಪುರ ತಾಲೂಕು 5)ಪುರಂದರ, ಪ್ರಾಯ 44 ವರ್ಷ, ವಾಸ: ಕುಂಭಾಶಿ ಗ್ರಾಮ, ಕುಂದಾಪುರ 6)ರಜಾಕ್,ಪ್ರಾಯ 52 ವರ್ಷ, ಕೊಳಂಬೆ, ಬ್ರಹ್ಮಾವರ ತಾಲೂಕು, 7)ಸದಾಶಿವ ದೇವಾಡಿಗ, ಪ್ರಾಯ 48 ವರ್ಷ, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಎಂಬವರ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 79, 80 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.
