IMG_20251018_215455.jpg
Spread the love

ಕಾರ್ಕಳ: ದಿನಾಂಕ :18-10-2025(ಹಾಯ್ ಉಡುಪಿ ನ್ಯೂಸ್)ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರು ಬಂಧಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್‌,ಅವರು ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರ್ವೇ ನಂಬ್ರ 181/1 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವವರ ಬಗ್ಗೆ ತಿಳಿದ ಗುಪ್ತ ಮಾಹಿತಿಯಂತೆ ದಿನಾಂಕ: 18.10.2025 ರಂದು ಬೆಳಿಗ್ಗೆ ಠಾಣೆಯ ಸಿಬ್ಬಂದಿಯವರೊಂದಿಗೆ ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ .

ದಾಳಿ ನಡೆಸಿದ ಸಮಯ ಕಲ್ಲು ಕೋರೆ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಇತರರು ಇದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು, ಆ ಸ್ಥಳವನ್ನು ಪರಿಶೀಲಿಸಿದಾಗ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಆ ಪ್ರದೇಶದಲ್ಲಿ ಸುರೇಂದ್ರ ಪೂಜಾರಿ ಹಾಗೂ KA 20 AB 2127ನೇ ನಂಬ್ರದ 407 ಟೆಂಪೋ ಚಾಲಕ ಸೇರಿಕೊಂಡು ಯಾವುದೇ ಪರವಾನಿಗೆಯನ್ನು ಹೊಂದದೆ ಸ್ವಂತ ಲಾಭಕ್ಕಾಗಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿ KA 20 AB 2127ನೇ ನಂಬ್ರದ 407 ಟೆಂಪೋದಲ್ಲಿ ಕಳವು ಮಾಡಲು ಪ್ರಯತ್ನಿಸಿದ ಬಗ್ಗೆ ಕಲ್ಲುಕೋರೆ ನಡೆಸುತ್ತಿದ್ದ ಸುರೇಂದ್ರ ಪೂಜಾರಿ, KA20AB2127ನೇ ನಂಬ್ರದ 407 ಟೆಂಪೋ ಚಾಲಕ ರಂಜಿತ್‌ ಎಂಬವರನ್ನು ಬಂಧಿಸಿ ಅವರ ವಿರುದ್ದ ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ 303(2),112(1) BNSರಂತೆ ಪ್ರಕರಣ ದಾಖಲಾಗಿದೆ.

error: No Copying!