ಉಡುಪಿ: ದಿನಾಂಕ:15-10-2025(ಹಾಯ್ ಉಡುಪಿ ನ್ಯೂಸ್) ಚಿನ್ನದ ಕೆಲಸ ನಿರ್ವಹಿಸುತ್ತಿರುವ ಮನೆಯೊಂದರ ಮಹಡಿಗೆ ನುಗ್ಗಿದ ಕಳ್ಳರು ಕೊಠಡಿಯೊಂದರಲ್ಲಿ ಇರಿಸಿದ್ದ ಲಕ್ಷಾಂತರ ಬೆಲೆ ಬಾಳುವ ಶುದ್ಧೀಕರಿಸಿದ ಚಿನ್ನ ವನ್ನು ಕಳ್ಳತನ ನಡೆಸಿರುವ ಘಟನೆ ಉಡುಪಿ ನಗರದ ಗುಂಡಿಬೈಲು ಎಂಬಲ್ಲಿ ನಡೆದಿದೆ.
ನಗರದ ಗುಂಡಿಬೈಲು ನಿವಾಸಿ ಅಜಯ್ ತುಕಾರಾಮ್ ಜಾಧವ್(34) ಅವರು ತನ್ನ ಮನೆಯ ಮಹಡಿ ಮೇಲಿನ ರೂಮಿನಲ್ಲಿ ಕೆಲಸಗಾರರಾದ ಪಾಂಡುರಂಗ ಮಹಡಿಕ್ ಹಾಗೂ ರೋಹಿತ್ ಘೋರ್ಪಡೆ ಎಂಬವರೊಂದಿಗೆ ಚಿನ್ನ ಶುದ್ದೀಕರಣ ಕೆಲಸವನ್ನು ಮಾಡಿಕೊಂಡಿದ್ದು ಅಜಯ್ ತುಕಾರಾಮ್ ಜಾಧವ್ ಹಾಗೂ ಕೆಲಸಗಾರರು ದಿನಾಂಕ 14/10/2025 ರಂದು ತಡ ರಾತ್ರಿ ವರೆಗೆ ಚಿನ್ನ ಶುದ್ದೀಕರಣ ಕೆಲಸ ಮಾಡಿ ಶುದ್ದೀಕರಿಸಿದ ಚಿನ್ನವನ್ನು ಪಾತ್ರೆಯಲ್ಲಿ ಬಿಟ್ಟು ರೂಮಿಗೆ ಬೀಗ ಹಾಕಿ ಮನೆಗೆ ಮಲಗಲು ಹೋಗಿರುತ್ತಾರೆ ಎನ್ನಲಾಗಿದೆ.
ದಿನಾಂಕ 14/10/2025 ರಂದು ಬೆಳಿಗ್ಗೆ ಕೆಲಸಗಾರ ಪಾಂಡುರಂಗ ಮನೆಯ ಮಹಡಿ ಮೇಲೆ ಹೋದಾಗ ಚಿನ್ನ ಶುದ್ದೀಕರಿಸುವ ಕೊಠಡಿಯ ಬೀಗವು ಕೆಳಗೆ ಬಿದ್ದಿದ್ದು, ಬಾಗಿಲಿನ ಚಿಲಕ ಕಟ್ಟಾಗಿರುತ್ತದೆ ಈ ವಿಚಾರವನ್ನು ಪಾಂಡುರಂಗನು ಅಜಯ್ ತುಕಾರಾಮ್ ಜಾಧವ್ ರಿಗೆ ತಿಳಿಸಿದ್ದು ಅವರು ಹೋಗಿ ನೋಡಿದಾಗ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಚಿಲಕವನ್ನು ಮುರಿದು ಕೊಠಡಿಯಲ್ಲಿ ಪಾತ್ರೆಯಲ್ಲಿ ಇರಿಸಿದ್ದ ಶುದ್ದೀಕರಿಸಿದ ಚಿನ್ನದ ಪೌಡರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನ ಹಾಗೂ ಅದರ ಮೌಲ್ಯ ತಿಳಿದುಬಂದಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.
