ಉಡುಪಿ: ದಿನಾಂಕ:14-10-2025 ( ಹಾಯ್ ಉಡುಪಿ ನ್ಯೂಸ್) ಹೆಂಡತಿ ದುಡಿದ ಹಣವನ್ನೆಲ್ಲಾ ಬಲವಂತವಾಗಿ ಕಸಿದು ಕೊಳ್ಳುತ್ತಿದ್ದ ಗಂಡನೋರ್ವ ವಂಚನೆ ನಡೆಸಿ ಹೆಂಡತಿಗೆ ಡೈವೋರ್ಸ್ ನೀಡದೆ ಮತ್ತೊಂದು ಮದುವೆಯಾಗಿದ್ದಾನೆ ಎಂದು ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಶ್ಮಾ ಹೆಚ್ (44) ಎಂಬವರು ನಾಗರ ಬಾವಿ, -72 ಬೆಂಗಳೂರು ಇಲ್ಲಿನ ನಿವಾಸಿಯಾಗಿದ್ದುದಿನಾಂಕ 16/05/2010 ರಂದು ಉಡುಪಿ ಜಿಲ್ಲೆಯ ಮಣಿಪಾಲ ಗೋಲ್ಡನ್ ಜುಬ್ಲಿ ಹಾಲ್ ನಲ್ಲಿ 1 ನೇ ಆರೋಪಿ ವಿಕ್ರಂ ರವರೊಂದಿಗೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು ಮದುವೆ ಖರ್ಚು ಸುಮಾರು 20 ಲಕ್ಷ ಹಣ ವಿಶ್ಮಾ ಹೆಚ್ ರವರ ತಂದೆ ತಾಯಿಯವರು ಮಾಡಿರುತ್ತಾರೆ ಎನ್ನಲಾಗಿದೆ.
ಮದುವೆಯ ಬಳಿಕ ವಿಶ್ಮಾ ಹೆಚ್ ರವರು ಗಂಡನ ಮನೆಯಾದ ಬೆಂಗಳೂರಿನ ಹಲ್ಸೂರು ಎಂಬಲ್ಲಿ ವಾಸವಾಗಿದ್ದು, ಆ ಸಮಯ ಅಸಿಸ್ಟೆಂಟ್ ಪ್ರೋಪೆಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಸಂಬಳದ ಹಣವನ್ನು ಆರೋಪಿತ ಗಂಡನಿಗೆ ಕೊಡಬೇಕಾಗಿದ್ದು ಕೊಡದೇ ಇದ್ದ ಸಮಯ ಆರೋಪಿ ಗಂಡನು ವಿಶ್ಮಾ ಹೆಚ್ ರವರಿಗೆ ನೀನು ಹಣವನ್ನು ಏನು ಮಾಡಿದೆ, ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಯುತ್ತಿದ್ದನು, ಅಲ್ಲದೇ ಮನೆಯಿಂದ ಹೊರಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದನು ಎನ್ನಲಾಗಿದೆ .
ವಿಶ್ಮಾ ಹೆಚ್ ರವರು ಅದಕ್ಕೆ ಹೆದರಿ ದುಡಿದ ಹಣವನ್ನು ಆರೋಪಿ ಗಂಡನಿಗೆ ಕೊಡುತ್ತಿದ್ದು 2 ನೇ ಆರೋಪಿತೆಯಾದ ರತ್ನಮಾಲಾ ರವರು 1 ನೇ ಆರೋಪಿ ಗಂಡನಿಗೆ ಹೇಳಿಕೊಟ್ಟು ಇನ್ನಷ್ಟು ತೊಂದರೆ ಮಾಡುವಂತೆ ಮಾಡುತ್ತಿದ್ದರು, ಅಲ್ಲದೇ 3 ನೇ ಆರೋಪಿತೆ ರಶ್ಮಿ ರವರು ಕೂಡ ಆರೋಪಿ ಗಂಡನಿಗೆ ಪೋನ್‌ನಲ್ಲಿ ಹೇಳಿಕೊಟ್ಟು ವಿಶ್ಮಾ ಹೆಚ್ ರನ್ನು ಬಿಡುವಂತೆ ಪ್ರಚೋದನೆ ನೀಡಿರುತ್ತಾರೆ ಎನ್ನಲಾಗಿದೆ.
ವಿಶ್ಮಾರವರಿಗೆ ದಿನಾಂಕ 19/04/2011 ರಂದು ಗಂಡು ಮಗು ಜನಿಸಿದ್ದು, ಆ ಸಮಯ ವಿಶ್ಮಾರವರು ತವರು ಮನೆಗೆ ಬಂದಿದ್ದು, ಡೆಲಿವರಿ ಖರ್ಚು ಕೂಡ ತವರು ಮನೆಯವರೇ ನೋಡಿಕೊಂಡಿರುತ್ತಾರೆ ಎನ್ನಲಾಗಿದೆ.
ನಂತರ 1 ನೇ ಆರೋಪಿ ಗಂಡನು ವೈದ್ಯಕೀಯ ವೃತ್ತಿಯ ಸಲುವಾಗಿ U K ಗೆ ಹೋಗಿದ್ದು ಅಪರೂಪಕ್ಕೆ ಊರಿಗೆ ಬಂದು ಹೋಗುತ್ತಿದ್ದು ವಿಶ್ಮಾರವರು ಕೂಡಾ ಚಿಕ್ಕ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಉದ್ಯೋಗಕ್ಕಾಗಿ U K ಗೆ ಹೋಗಿದ್ದು, ವಿಶ್ಮಾರವರು ವಾಪಾಸು ಊರಿಗೆ ಬಂದು ಅವರ ಮತ್ತು ಮಗುವಿನ ಪಾಸ್ ಪೋರ್ಟ್ ವಿಸಾ ರೆಡಿ ಮಾಡಿಕೊಂಡು ಯು.ಕೆ ಗೆ ಬರುವುದಾಗಿ 1 ನೇ ಆರೋಪಿತ ಗಂಡನಿಗೆ ಹೇಳಲು ಫೋನ್ ಮಾಡಿದಾಗ ಕರೆ ಸ್ವೀಕರಿಸದೇ, ಇ ಮೇಲ್ ನಲ್ಲಿ ಕೂಡ ಯಾವುದೇ ಉತ್ತರ ಕೊಟ್ಟಿರುವುದಿಲ್ಲ.
1ನೇ ಆರೋಪಿತ ಗಂಡ ವಿಕ್ರಂನು ವಿಶ್ಮಾರವರನ್ನು ನಂಬಿಸಿ ಮದುವೆ ಮಾಡಿಕೊಂಡು ಹಂತ ಹಂತವಾಗಿ ಸಂಬಳದ ಹಣವನ್ನು ಸುಮಾರು 10 ಲಕ್ಷದವರೆಗೆ ಪಡೆದು, ವಾಪಾಸು ನೀಡುವುದಾಗಿ ಹೇಳಿ ವಾಪಾಸು ಕೊಡದೇ ನಂಬಿಕೆ ದೋಹ್ರ ಮಾಡಿರುತ್ತಾನೆ. ವಿಶ್ಮಾರವರಿಗೆ ಡೈವೋರ್ಸ್ ನೀಡದೆ ವಿಶ್ಮಾರವರಿಗೆ ಮೋಸ ಮಾಡಿ ಇದೀಗ 2ನೇ ಮದುವೆಯಾಗಿದ್ದಾನೆ ಎಂದು ವಿಶ್ಮಾ ಹೆಚ್ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 318, 352, 115(2), 3(5) BNS ರಂತೆ ಪ್ರಕರಣ ದಾಖಲಾಗಿದೆ.
