AcetoFive.jpeg
Spread the love

ಕುಂದಾಪುರ: ದಿನಾಂಕ 14/10/2025(ಹಾಯ್ ಉಡುಪಿ ನ್ಯೂಸ್) ಮದ್ದುಗುಡ್ಡೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು. ಕುಂದಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ನಂಜಾ ನಾಯ್ಕ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾದ ನಂಜಾನಾಯ್ಕ ಎನ್  ಅವರು ದಿನಾಂಕ:12-10-2025 ರಂದು ಠಾಣೆಯಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಕೂಡಲೇ ದಾಳಿ  ಮಾಡಿದಾಗ ಅಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳು ಓಡಿ ಹೋಗಲು ಪ್ರಯತ್ನಿಸಿದ್ದು ಅವರುಗಳಲ್ಲಿ  ಆರೋಪಿಗಳಾದ 1.ಮಿಥುನ ಖಾರ್ವಿ ಪ್ರಾಯ: 35 ವರ್ಷ  ವಾಸ: ಪಾರ್ವತಿ ನಿಲಯ, ಕಲ್ಯಾಣ ಸ್ವಾಮಿ ರಸ್ತೆ, ಕುಂದಾಫುರ ಕಸಬಾ ಗ್ರಾಮ ಕುಂದಾಪುರ 2.ಚಂದ್ರ ಪೂಜಾರಿ ಪ್ರಾಯ: 45 ವಾಸ: ಸಿದ್ದನಾಯಕನ ರಸ್ತೆ ಕಸಬ ಗ್ರಾಮ ಕುಂದಾಪುರ  3.ರೆಹಮತ್‌ ಪ್ರಾಯ:51 ವರ್ಷ  ವಾಸ: ರೋಯಲ್‌ ಸಭಾ ಭವನದ ಹಿಂಭಾಗ ಚಿಕನ್‌ ಸಾಲ್‌ ರಸ್ತೆ ಕಸಬ ಗ್ರಾಮ 4. ನಿರಂಜನ್‌ ನಾಯಕ್‌ ಪ್ರಾಯ: 39 ವರ್ಷ ರನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ,

ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಬಿಳಿ ಬಣ್ಣದ ಪಾಲೀಥಿನ್ ಚೀಲ-1, 2) ಡೈಮಾನ್‌, ಆಟಿನ್‌, ಇಸ್ಪೀಟ್‌ ಕಳವಾರ್‌ ಚಿತ್ರಗಳಿರುವ 52 ಇಸ್ಪೀಟ್‌ ಎಲೆಗಳು 3) ನಗದು ರೂ 2660/- ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಉಳಿದ ಆಪಾದಿತರಾದ ಕಿರಣ, ಹರೀಶ್‌, ಮಂಜುನಾಥ ಎಂಬವರು ದಾಳಿಯ ಸಮಯ ಓಡಿಹೋಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!