ಮಣಿಪಾಲ: ದಿನಾಂಕ 10/10/2025(ಹಾಯ್ ಉಡುಪಿ ನ್ಯೂಸ್)ರಾಜೀವ ನಗರದ ಮನೆಯೊಂದರಲ್ಲಿ ಗಾಂಜಾ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಸಮಾಜಘಾತುಕ ಪಾಪಿಗಳನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್ .ಎನ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯಕುಮಾರಿ ಎಸ್.ಎನ್ , ಅವರು ದಿನಾಂಕ :08-10-2025ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಇರುವ ಮಾತಾಪಿತಾ ಎಂಬ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಗುಪ್ತ ಮಾಹಿತಿಯಂತೆ ಕೂಡಲೇ ದಾಳಿ ಮಾಡಿ ಆರೋಪಿ 1) ಸೀತಾರಾಮ ರೆಡ್ಡಿ ತೌಟರೆಡ್ಡಿ(21), ಆಂದ್ರಪ್ರದೇಶ ರಾಜ್ಯ ಹಾಲಿ ವಿಳಾಸ: ಮಾತಾಪಿತಾ, ರಾಜೀವನಗರ, 80 ಬಡಗಬೆಟ್ಟು ಉಡುಪಿ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನನ್ನು ವಿಚಾರಣೆ ನಡೆಸಿದಾಗ ತಾನು ತನ್ನ ಸ್ನೇಹಿತ ತನೀಶ್ ರತ್ನ ಸೇರಿ ಮೇಘಾಲಯದಿಂದ ಆನ್‌ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಮಾದಕ ವಸ್ತುಗಳನ್ನು ಅಂಚೆ ಮುಖೇನ ಖರೀದಿ ಮಾಡಿ ಮಣಿಪಾಲ ಹಾಗೂ ಉಡುಪಿ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ಥತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ನುಡಿದು ಆತನು ತೋರಿಸಿಕೊಟ್ಟಂತೆ ಮಂಚದ ಕೆಳಗೆ ತನ್ನ ಮಂಚದ ಕೆಳಭಾಗದಲ್ಲಿ ಅಂಚೆ ಮುಖೇನ ಬಂದ ಪ್ಯಾಕ್ ನಲ್ಲಿ ಗಾಂಜಾ ಇರುವುದಾಗಿ ತೋರಿಸಿ ಕೊಟ್ಟಿದ್ದು ಪೊಲೀಸರು ಪರಿಶೀಲಿಸಿದಾಗ ಅಲ್ಲಿ ಎರಡು ಪಾರ್ಸೆಲ್ ಪ್ಲಾಸ್ಟಿಕ್ ಕವರ್ ಗಳು ಇದ್ದು ಆ ಕವರ್ ಗಳಲ್ಲಿ ಡೈಪರ್‌ಗಳು ಇದ್ದು ಅದರ ಮಧ್ಯದಲ್ಲಿ ಒಟ್ಟು ಮೂರು ಪ್ಯಾಕ್ ಏರ್ ಜಿಪ್ ಬ್ಯಾಗ್ ನಲ್ಲಿ 01 ಕೆಜಿ ಗೂ ಹೆಚ್ಚು ಗಾಂಜಾ ಇರುವುದು ಕಂಡು ಬಂತು ಎನ್ನಲಾಗಿದೆ.
ಪಾರ್ಸೆಲ್ ಪ್ಲಾಸ್ಟಿಕ್ ಕವರ್ ನಲ್ಲಿ ಇನ್ನೊಂದು ಏರ್ ಜಿಪ್ ಕವರ್ ಇದ್ದು ಅದರಲ್ಲಿ ಖಾಲಿ ಪೇಪರ್ ನಲ್ಲಿ ಗಾಂಜಾವನ್ನು ಹಾಕಿ ಸುತ್ತಿದ ಎರಡು ಪ್ಯಾಕ್ ಗಳು ಹಾಗೂ ಖಾಲಿ ಎರಡು ಏರ್ ಜಿಪ್ ಕವರ್ ಗಳು ಇರುವುದು ಕಂಡು ಬಂದಿದ್ದು ಹಾಗೂ ಆ ಕೊಠಡಿಯಲ್ಲಿ ಮೂಲೆಯಲ್ಲಿನ ಟೇಬಲ್ ಮೇಲೆ ಗಾಂಜಾವನ್ನು ಎಳೆಯುವ ಎರಡು ಬಾಂಗ್ ಹಾಗೂ ಮಂಚದ ಮೊಬೈಲ್ ಸ್ಟಾಂಡ್ ಮೇಲೆ ಸೀತಾರಾಮ ರೆಡ್ಡಿ ತೌಟರೆಡ್ಡಿ ಈತನ ಐಫೋನ್ ಹಾಗೂ ಒಂದು ಪರ್ಸ್ ಇದ್ದು ಪರ್ಸ್ ನಲ್ಲಿ ಒಟ್ಟು 3,180/- ರೂಪಾಯಿ ನಗದು ಇರುವುದು ಕಂಡುಬಂದಿದೆ ಎನ್ನಲಾಗಿದೆ. ಆರೋಪಿಗಳಾದ ಸೀತಾರಾಮ ರೆಡ್ಡಿ ತೌಟರೆಡ್ಡಿ ಹಾಗೂ ತನೀಶ್ ರತ್ನ ಮಾದಕ ವಸ್ತು ಗಾಂಜಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:8(C), 20(b) (ii)(b) NDPS Act ರಂತೆ ಪ್ರಕರಣ ದಾಖಲಾಗಿದೆ.
