istockphoto-1313442697-612x612.jpg
Spread the love

ಕುಂದಾಪುರ: ದಿನಾಂಕ :10-10-2025(ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಗ್ರಾಮದ ಕಟ್ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್‌ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ ಎನ್ ಅವರಿಗೆ ಕೋಟೇಶ್ವರ ಗ್ರಾಮದ  ಕಟ್ಕೇರಿ,  ಮಂಜುನಾಥ ಆಟೋವರ್ಕ್‌ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಓರ್ವ  ವ್ಯಕ್ತಿಯು  ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ  ಆಗುತ್ತಿದೆ  ಎಂಬುದಾಗಿ ಮಾಹಿತಿ ಬಂದಂತೆ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೊರಟು  ಸ್ಥಳಕ್ಕೆ ತಲುಪಿದಾಗ ಓರ್ವ ವ್ಯಕ್ತಿ ಕುಳಿತು ಕೊಂಡು ಗ್ಲಾಸಿನಲ್ಲಿ ಮದ್ಯವನ್ನು ಹಾಕಿಕೊಂಡು  ಕುಡಿಯುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಆರೋಪಿತನ  ಬಳಿ ಹೋಗಿ ಮದ್ಯ ಸೇವಿಸುತ್ತಿರುವ ಆರೋಪಿತನ ಹೆಸರು ವಿಳಾಸ ಕೇಳಿದಾಗ ನಾಗರಾಜ್‌ ಪ್ರಾಯ:44 ವರ್ಷ ಕಾಗೇರಿ, ಕೋಟೇಶ್ವರ ಗ್ರಾಮ ಎಂಬುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.  ಆರೋಪಿತನ  ವಶದಲ್ಲಿದ್ದ 650  ML UB EXPORT ಬೀಯರ್‌ ಬಾಟಲಿ-1, ಒಂದು   ಪ್ಲಾಸ್ಟಿಕ್ ಗ್ಲಾಸ್‌  ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ:15(A) KE Act ರಂತೆ ಪ್ರಕರಣ ದಾಖಲಾಗಿದೆ.

error: No Copying!