images-8.jpeg
Spread the love

ಪಡುಬಿದ್ರಿ: ದಿನಾಂಕ: 28-10-2025(ಹಾಯ್ ಉಡುಪಿ ನ್ಯೂಸ್) ಮುಲ್ಕಿ ಯ ಫ್ರುಟ್ಸ್ ಮತ್ತು ತರಕಾರಿ ಅಂಗಡಿಯ ಮಾಲಕನೋರ್ವನು ಜಮೀಲ್ ಎಂಬವರಿಂದ ಸಾಲ ಪಡೆದು ಇದೀಗ ವಾಪಾಸು ನೀಡದೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಾಲ ನೀಡಿದ ವ್ಯಕ್ತಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಮುಲ್ಕಿ ಸದಾಶಿವ ನಗರದ ನಿವಾಸಿ ಜಮೀಲ್ ಎಂಬವರು  ಎ.ಸಿ.ಜೆ.(ಹಿ.ವಿ) ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯ ದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ದೂರಿನಲ್ಲಿ  ತಿಳಿಸಿರುವಂತೆ 1ನೇ ಆರೋಪಿ ರಝಕ್‌ (45) ಎಂಬವನು  2ನೇ ಆರೋಪಿ ಶಾಹಿದ್‌ (35) ಮುಲ್ಕಿ, ಮಂಗಳೂರು ಎಂಬವರ ಗಂಡನಾಗಿದ್ದು 2 ನೇ ಆರೋಪಿ ಶಾಹಿದ್ ಅವರು ಜಮೀಲ್‌ (59) ಸದಾಶಿವ  ನಗರ ಮುಲ್ಕಿ, ಮಂಗಳೂರು ಇವರ ಸಂಬಂಧಿಯಾಗಿದ್ದಾರೆ ಎನ್ನಲಾಗಿದೆ.

ಮಂಗಳೂರು ತಾಲೂಕು ಕೆ.ಎಸ್‌.ರಾವ್‌ ನಗರ ಕೊಲ್ನಾಡ್‌ ಸರಕಾರಿ ಶಾಲೆಯ ಬಳಿ ಇರುವ ಕೊಲ್ನಾಡ್‌ ಸೆಂಟ್ರಲ್‌ ಮಾರ್ಕೇಟ್‌ ಎಂಬ ಫ್ರುಟ್ಸ್‌ ಮತ್ತು ತರಕಾರಿ ಅಂಗಡಿಯು 1 ನೇ ಆರೋಪಿ ರಝಾಕ್ ಗೆ  ಸೇರಿದ್ದಾಗಿದ್ದು  ಸುಮಾರು ಒಂದು ವರ್ಷದ ಹಿಂದೆ ಆರೋಪಿಗಳು ಜಮೀಲ್ ರವರ ಬಳಿ ತನ್ನ ವ್ಯವಹಾರಕ್ಕೆ ರೂ. 2,00,000/- ವನ್ನು ನೀಡುವಂತೆ ತಿಳಿಸಿ ಒಂದು ತಿಂಗಳೊಳಗಾಗಿ ವಾಪಾಸು ನೀಡುವುದಾಗಿ ತಿಳಿಸಿದಂತೆ ಜಮೀಲ್ ರವರು ಆರೋಪಿಗಳ ಮಾತನ್ನು ನಂಬಿ ತನ್ನ ಮಗನ ಉಚ್ಚಿಲದ ಮನೆಯಲ್ಲಿ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಜಮೀಲ್ ರವರು ಆರೋಪಿಗಳ ಬಳಿ ತಾನು ನೀಡಿದ ಹಣವನ್ನು ವಾಪಾಸು ಕೇಳಿದಾಗ ಇವತ್ತು ನಾಳೆ ಎಂದು ಸತಾಯಿಸುತ್ತಾ ಹಣವನ್ನು ವಾಪಾಸು ನೀಡದೇ ದಿನ ಮುಂದೂಡುತ್ತಾ ಜಮೀಲ್ ರವರಿಗೆ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಲ್ಲದೇ ಆರೋಪಿಗಳು ಜಮೀಲ್ ರವರಿಗೆ ಮೋಸ ಮಾಡುವ ಉದ್ದೇಶದಿಂದ  ರೂ. 2,00,000/- ಹಣ ಪಡೆದು ವಾಪಾಸು ನೀಡದೇ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ   ಕಲಂ: 406, 420, 504, 506 ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.

error: No Copying!