images-4.jpeg
Spread the love

ಕೋಟ: ದಿನಾಂಕ:05-10-2025(ಹಾಯ್ ಉಡುಪಿ ನ್ಯೂಸ್) ಮನೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ ಚಿನ್ನದ ಸರ ಕಳ್ಳತನ ಆಗಿದೆ ಎಂದು ನಾಲ್ತೂರು ನಿವಾಸಿ ಬಸವ ಪೂಜಾರಿ ಎಂಬವರು ದೂರು ದಾಖಲಿಸಿದ್ದಾರೆ.

ಯಡಾಡಿ ಮತ್ಯಾಡಿ ಗ್ರಾಮದ ನಾಲ್ತೂರು ನಿವಾಸಿ ಬಸವ ಪೂಜಾರಿ (72) ಎಂಬವರು ದಿನಾಂಕ:26.09.2025 ರಂದು  ಮನೆಯಲ್ಲಿರುವಾಗ್ಗೆ ಸಂಜೆ  ಶಿರಿಯಾರ ನಿವಾಸಿ ಆನಂದ ಎಂಬವರು ಮನೆಗ ಬಂದು ಎಲ್ಲಾದರೂ ಕೆಲಸವಿದ್ದರೆ ಹೇಳಿ ಎಂದು  ಮಾತನಾಡಿಕೊಂಡು ರಾತ್ರಿ 8.00 ಗಂಟೆ ಸುಮಾರಿಗೆ  ಮನೆಯಿಂದ ಹೋಗಿದ್ದು , ಪ್ರತಿದಿನ ಬೆಳಿಗ್ಗೆ ತುಳಸಿಕಟ್ಟೆ ಪೂಜೆ ಮಾಡುವ ಸಂದರ್ಭದಲ್ಲಿ  ಚಿನ್ನದ ಸರವನ್ನು ಹಾಕುವುದು ವಾಡಿಕೆಯಾಗಿದ್ದು , ಅದರಂತೆ ದಿನಾಂಕ:27.09.2025 ರಂದು ಬೆಳಿಗ್ಗೆ  ಮನೆಯಲ್ಲಿ  ಗೋದ್ರೇಜ್‌ ನಲ್ಲಿಟ್ಟಿದ್ದ ಚಿನ್ನದ ಸರವನ್ನು ತೆಗೆಯಲು  ಹೋದಾಗ ಚಿನ್ನದ ಸರ  ಕಳ್ಳತನವಾಗಿದ್ದು ಚಿನ್ನದ ಸರ 18 ಗ್ರಾಂ ತೂಕದ್ದಾಗಿದ್ದು ,ಚಿನ್ನದ ಸರದ ಅಂದಾಜು ಮೌಲ್ಯ 1,45,000/- ರೂ ಆಗಿರುತ್ತದೆ.ಮನೆಗೆ ಬೇರೆ ಯಾರೂ ಬಂದಿರುವುದಿಲ್ಲ.ಆನಂದನು ದಿನಾಂಕ:26.09.2025 ರಂದು ಮನೆಗ ಬಂದಿದ್ದು ಆನಂದ ಅಥವಾ ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬಸವ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!