ಅಮಾಸೆಬೈಲು: ದಿನಾಂಕ 05-10-2025(ಹಾಯ್ ಉಡುಪಿ ನ್ಯೂಸ್) ಅಮಾಸೆಬೈಲು ಮಾರ್ಕೆಟ್ ಬಳಿಯಿರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಆರೋಪಿತ ನರಸಿಂಹ ಪೂಜಾರಿಯು ತನ್ನ ಅಂಗಡಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ರಟ್ಟಿನ ಬಾಕ್ಸ್ ಒಂದರಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ WINDSOR DELUXE 90 ML ಎಂದು ಬರೆದ 90 ML ನ 53 ರಟ್ಟಿನ ಸರಾಯಿ ಪ್ಯಾಕೇಟು ( 4.770 ಲೀಟರ್ ಅಂದಾಜು ಮೌಲ್ಯ ರೂ 2,650/ರೂಪಾಯಿ ) ಗಳನ್ನು ಮತ್ತು ರಟ್ಟಿನ ಬಾಕ್ಸ್ ಮತ್ತು ಮದ್ಯ ಮಾರಾಟದಿಂದ ಸಂಗ್ರಹಿಸಿದ ನಗದು ರೂ 2,650/ ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆಪಾದಿತ ನರಸಿಂಹ ಪೂಜಾರಿ ಗಾಂಧಿ ಜಯಂತಿಯ ಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಿ ಸರಕಾರದ ಆದೇಶವಿದ್ದರೂ ಸಹ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದರಿಂದ ಹಾಗೂ ಮದ್ಯದ ಪ್ಯಾಕೇಟುಗಳನ್ನು ಮಾರಾಟ ಮಾಡಲು ನೀಡಿದ ಗಿರಿಜಾ ಬಾರ್ ಮ್ಯಾನೇಜರ್ ಪ್ರವೀಣ್ ಅವರ ವಿರುದ್ಧ ಕಲಂ 32,34 36 (ಬಿ) ಅಬಕಾರಿ ಕಾಯ್ದೆ ಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ 32,34, 36 (ಬಿ) ಅಬಕಾರಿ ಕಾಯ್ದೆ ರಂತೆ ಪ್ರಕರಣ ದಾಖಲಿಸಲಾಗಿದೆ.
ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಕುಮಾರ್ ಅವರು ದಿನಾಂಕ: 02-10-2025 ರಂದು ಕುಂದಾಪುರ ಶಾರದೋತ್ಸವ ಮೆರವಣಿಗೆಯ ಬಂದೋಬಸ್ತು ಕರ್ತವ್ಯದಲ್ಲಿರುವಾಗ ಅಮಾಸೆಬೈಲು ಮಾರ್ಕೆಟು ಬಳಿಯಿರುವ ನರಸಿಂಹ ಪೂಜಾರಿಯವರ ಅಂಗಡಿಯಲ್ಲಿ ಅಕ್ರಮವಾಗಿ ಪರವಾನಿಗೆಯಿಲ್ಲದೆ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿದಾರರಿಂದ ದೊರಕಿದ ಮಾಹಿತಿಯಂತೆ ಪಿಎಸ್ಐ ಯವರು ಅಮಾಸೆಬೈಲಿಗೆ ಬಂದು ಠಾಣೆಯ ಸಿಬ್ಬಂದಿಯವರ ಜೊತೆಯಲ್ಲಿ ಸ್ಥಳಕ್ಕೆ ಧಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
