ಉಡುಪಿ: ದಿನಾಂಕ:30-09-2025 (ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರ ಅನುಮತಿ ಇಲ್ಲದೆ ಅವರ ಬ್ಯಾಂಕ್ ಖಾತೆ ಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಯಾರೋ ವರ್ಗಾವಣೆ ಮಾಡಿ ಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ, ಕುಂಜಿಬೆಟ್ಟು ನಿವಾಸಿ ಸಂಧ್ಯಾ (55) ಎಂಬವರು ದಿನಾಂಕ 28/09/25 ರಂದು ಮನೆಯಲ್ಲಿದಾಗ ಮೊಬೈಲ್ ಗೆ ಸಂದೇಶ ಬಂದಿದ್ದು ನೋಡಿದಾಗ ಸಂಧ್ಯಾ ರವರ ಕೆನರಾ ಬ್ಯಾಂಕ್ ಖಾತೆ ಯಿಂದ ಒಂದು ಬಾರಿ ರೂಪಾಯಿ 49000, ಇನ್ನೊಂದು ಬಾರಿ ರೂಪಾಯಿ 49400 ಕಡಿತವಾಗಿದ್ದು ಬಳಿಕ ಸಂಧ್ಯಾ ರವರ ಕೆನರಾ ಬ್ಯಾಂಕ್ ಇನ್ನೊಂದು ಖಾತೆ ಯಿಂದ ಕ್ರಮವಾಗಿ ರೂಪಾಯಿ 49,900 ಹಾಗೂ 49,900 2 ಬಾರಿ ಕಡಿತಗೊಂಡಿರುವ ಸಂದೇಶ ಬಂದಿದ್ದು ,ಕೂಡಲೇ 1930 ಗೆ ಕರೆ ಮಾಡಿ ದೂರು ದಾಖಲು ಮಾಡಿರುತ್ತಾರೆ ಎನ್ನಲಾಗಿದೆ.
ಸಂಧ್ಯಾ ರವರ ಖಾತೆಯಿಂದ ಯಾರೋ ಅಪರಿಚಿತರು ಒಟ್ಟು ರೂಪಾಯಿ 198,200 ನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 66(D) IT Act ರಂತೆ ಪ್ರಕರಣ ದಾಖಲಾಗಿದೆ.
