images-8.jpeg
Spread the love

ಬ್ರಹ್ಮಾವರ: ದಿನಾಂಕ 30/09/2025 (ಹಾಯ್ ಉಡುಪಿ ನ್ಯೂಸ್) ಕಚ್ಚೂರು ಬಸ್ ನಿಲ್ದಾಣ ಬಳಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸದಾನಂದ ನಾಯ್ಕ್‌ ಅವರಿಗೆ ದಿನಾಂಕ: 29-09-2025 ರಂದು ಠಾಣೆಯಲ್ಲಿರುವಾಗ ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಠಾಣೆಯಿಂದ ಸಿಬ್ಬಂದಿಯವರನ್ನು ಕರೆದುಕೊಂಡು ಬೆಳಗ್ಗಿನ ಜಾವ 01:10 ಗಂಟೆಗೆ ಬ್ರಹ್ಮಾವರ ಠಾಣಾ ಸರಹದ್ದಿನ ಕಚ್ಚೂರು ಗ್ರಾಮದ ಕಚ್ಚೂರು ಬಸ್‌ ನಿಲ್ದಾಣದ ಸಮೀಪ ಹೋದಾಗ ಆರೋಪಿಗಳಾದ 1. ರಾಘವೇಂದ್ರ (36), ಕಚ್ಚೂರು ಗ್ರಾಮ ಬ್ರಹ್ಮಾವರ , 2. ಜಗನ್ನಾಥ (49),ಬಾರ್ಕೂರು ಕಚ್ಚೂರು ಗ್ರಾಮ, ಬ್ರಹ್ಮಾವರ ಇವರು ತಮ್ಮ ಮೊಬೈಲ್‌ ನೋಡಿಕೊಂಡು ತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಕೇಕೆ ಹೊಡೆಯುತ್ತಿದ್ದು, ಆಗ ಆರೋಪಿಗಳಾದ ರಾಘವೇಂದ್ರ ಮತ್ತು ಜಗನ್ನಾಥ ಓಡಿ ಹೋಗಲು ಪ್ರಯತ್ನಿಸಿದಾಗ ಪೊಲೀಸ್ ಸಿಬ್ಬಂದಿಯವರ ಜೊತೆ ಹಿಡಿದು ವಿಚಾರಿಸಿದಾಗ ಆರೋಪಿ ರಾಘವೇಂದ್ರನು ತನಗೆ ಆರೋಪಿ ಕಾರ್ತಿಕ್‌ ಎಂಬಾತನು ಕ್ರಿಕೆಟ್‌ ಬೆಟ್ಟಿಂಗ್‌ ನಡೆಸಲು ತನ್ನ ಮೊಬೈಲ್‌ನಲ್ಲಿ Parker ಎಂಬ (Parker777.io/sports/4 ಎಂಬ google link ) ಕ್ರಿಕೆಟ್‌ ಬೆಟ್ಟಿಂಗ್‌ ಆಪ್‌ನ್ನು ಹಾಕಿಸಿಕೊಟ್ಟಿದ್ದು ಅದರಂತೆ ತಾನು ಜನರಿಂದ ಹಣವನ್ನು ಪಡೆದುಕೊಂಡು ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದು ಈ ದಿನ ಇಂಡಿಯಾ ಪಾಕಿಸ್ತಾನ ಕ್ರಿಕೇಟ್‌ ಮ್ಯಾಚ್‌ ಇದ್ದು ಜನರು ಈ ಕ್ರಿಕೇಟ್‌ ಮ್ಯಾಚ್‌ಗೆ ಹಣವನ್ನು ಹೂಡುವಂತೆ ತಿಳಿಸಿರುವುದರಿಂದ ತಾನು ಈ ಬೆಟ್ಟಿಂಗ್‌ ಆಪ್‌ನಲ್ಲಿ ಜನರ ಹಣವನ್ನು ಪಡೆದುಕೊಂಡು ಹೂಡಿದ್ದು ಅವರು ಹಾಕಿದ ತಂಡವು ಸೋತಿರುವುದರಿಂದ ತನಗೆ ತುಂಬಾ ಲಾಭವಾಗಿರುತ್ತದೆ ಎಂದು ತಿಳಿಸಿರುತ್ತಾನೆ. ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಆರೋಪಿಗಳನ್ನು  ಬಂಧಿಸಿದ್ದು  ಅವರ ವಶದಲ್ಲಿದ್ದ 2 Vivo ಮೊಬೈಲ್‌ ಫೋನ್‌ ವಶಕ್ಕೆ ಪಡೆದು ಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ:78 KP ACT & 112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!