IMG_20250928_091322.jpg
Spread the love

ಕಾರ್ಕಳ: ದಿನಾಂಕ: 28-09-2025(ಹಾಯ್ ಉಡುಪಿ ನ್ಯೂಸ್) ಶಿವಮೊಗ್ಗ ನಿವಾಸಿ ವಿಧವೆ ಮಹಿಳೆಯೋರ್ವರನ್ನು  ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿ ಯಾದಾಗ ಮದುವೆಯಾಗದೆ ಆಕೆಯ ಹೊಟ್ಟೆ ಗೆ ಒದ್ದು ಗರ್ಭಪಾತ ವಾಗುವಂತೆ ಮಾಡಿದ ಸೂಡ ನಿವಾಸಿಯೋರ್ವನ ಮೇಲೆ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಗರೇಟ್ (48) ತಂದೆ: ದಿ: ಇರುದಯನಾದನ್ ಯಾನೆ ಪ್ರಭಾಕರ್ ವಾಸ: ವಿಜಯನಗರ 6ನೇ ಕ್ರಾಸ್, ಗೋಪಾಳ ಶಿವಮೊಗ್ಗ ಜಿಲ್ಲೆ  ಎಂಬವರು ಗಂಡ ಮೃತಪಟ್ಟ ನಂತರ  2023 ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿರುವಾಗ ವಧು-ವರರ ಅನ್ವೇಷಣೆ ಜೋಡಿ ಆಪ್ ನಲ್ಲಿ ಪ್ರೊಫೈಲ್ ನಲ್ಲಿ  ಹಾಕಿದ ನಂತರ ದಿನಾಂಕ 21/11/2023 ರಲ್ಲಿ ಮಾರ್ಗರೇಟ್ ಗೆ ಮೊಬೈಲ್ ನಂಬ್ರ 7899901153 ನೇದರಿಂದ ಆರೋಪಿ ರೋನಾಲ್ಡ್ ಫೆರ್ನಾಂಡಿಸ್ ಜಂತ್ರ ಆಶ್ರಯ ಕಾಲನಿ   ಸೂಡಾ ಗ್ರಾಮ ,ಎಂಬವನು ಕರೆ ಮಾಡಿ  ಪರಿಚಯಿಸಿಕೊಂಡು   ಉಡುಪಿಗೆ ಬರಲು ತಿಳಿಸಿ ಅಲ್ಲಿಂದ ಆತನ ಮನೆಯಾದ    ಕಾರ್ಕಳ ತಾಲೂಕು, ಸೂಡಾ ಗ್ರಾಮದ ಜಂತ್ರ ಆಶ್ರಯ ಕಾಲನಿ   ಎಂಬಲ್ಲಿಗೆ ದಿನಾಂಕ 22/11/2023 ರಂದು  ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಅಲ್ಲಿ ಮದುವೆ ಬಗ್ಗೆ ಮಾತನಾಡಲು ಮನೆಯವರು ಬರುತ್ತಾರೆಂದು ತಿಳಿಸಿ  ನಂಬಿಸಿ ಮನೆಯಲ್ಲಿಯೇ ನಿಲ್ಲಿಸಿ ಮರುದಿನ ಊರಿಗೆ ಹೋಗುವಂತೆ ತಿಳಿಸಿ ಮಾರ್ಗರೇಟ್ ರನ್ನು ಬೆಳ್ಮಣ್ ಬಸ್ ಸ್ಟಾಂಡ್ ಗೆ   ಬಿಟ್ಟಿರುತ್ತಾನೆ ಎಂದೂ ನಂತರ ಆರೋಪಿತ ರೋನಾಲ್ಡ್ ಫೆರ್ನಾಂಡಿಸ್ ನು ದಿನಾಂಕ 24/11/2023  ರಂದು ಶಿವಮೊಗ್ಗಕ್ಕೆ ಹೋಗಿ ಮಾರ್ಗರೇಟ್ ರನ್ನು ಮದುವೆಯಾಗುವುದಾಗಿ ನಂಬಿಸಿ ಜಂತ್ರಕ್ಕೆ ಮನೆಗೆ ಕರೆದುಕೊಂಡು ಬಂದು ಸುಮಾರು ಒಂದು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಈ ಸಮಯ ಮಾರ್ಗರೇಟ್ ಗರ್ಭವತಿಯಾಗಿದ್ದು ಮದುವೆಯಾಗುವಂತೆ ಒತ್ತಾಯ ಮಾಡಿದಾಗ ಮನೆಯಲ್ಲಿ ಗಲಾಟೆ ಮಾಡಿ  ದಿನಾಂಕ 02/11/2024 ರಂದು ರಾತ್ರಿ ಸಮಯ 11:00 ಗಂಟೆ ಸುಮಾರಿಗೆ  ಮದುವೆಯಾಗುವುದಿಲ್ಲ ಎಂದು ಮಾರ್ಗರೇಟ್ ರ ಜೊತೆ ಗಲಾಟೆ ಮಾಡಿ  ಕತ್ತಿಯಿಂದ ಹೊಡೆಯಲು ಹೋದಾಗ ಮಾರ್ಗರೇಟ್ ರವರು ಕತ್ತಿಯನ್ನು ಹಿಡಿದುಕೊಂಡಾಗ ಕೈಗೆ   ಗಾಯವಾಗಿದ್ದು, ಆ ಸಮಯ ಆಪಾದಿತ ರೋನಾಲ್ಡ್ ಫೆರ್ನಾಂಡಿಸ್ ನು ಕಾಲಿನಿಂದ ಮಾರ್ಗರೇಟ್ ರ  ಹೊಟ್ಟೆಗೆ ತುಳಿದು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದು, ಹೊಟ್ಟೆಗೆ ತುಳಿದಿರುವುದರಿಂದ ಗರ್ಭಪಾತ ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ 115(2), 118(1), 64, 353, 126(2)   ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!