ಕೋಟ: ದಿನಾಂಕ:24-09-2025(ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಜಂಕ್ಷನ್ ನಲ್ಲಿರುವ ಲಾಡ್ಜ್ ಒಂದರ ಮಾಲೀಕರಿಗೆ ಲಾಡ್ಜ್ ನ ಸ್ವಾಗತಕಾರ ನೌಕರನು ನಂಬಿಸಿ ಒಂದೂವರೆ ಲಕ್ಷ ರೂಪಾಯಿ ವಂಚನೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಸಚಿನ್ ಕುಮಾರ್ (29) ಎಂಬವರು ಸಂತೋಷ ಶೆಟ್ಟಿ ಎಂಬವರೊಂದಿಗೆ ಒಂದು ವರ್ಷದಿಂದ ತೆಕ್ಕಟ್ಟೆ ಗ್ರಾಮದ ಜಂಕ್ಷನ್ ನಲ್ಲಿರುವ ಜನಪ್ರಿಯ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕೃಷ್ಣ ಹೆಸರಿನ ಲಾಡ್ಜ್ ನಡೆಸಿಕೊಂಡು ಬಂದಿದ್ದು, ಇದೇ ವರ್ಷ ಮೇ ತಿಂಗಳಿನಲ್ಲಿ ರಾಮನಗರ ಜಿಲ್ಲೆಯ ಬಿಡದಿಯ ನಿವಾಸಿ ಆರೋಪಿ ಪುರೋಷೋತ್ತಮ್ ಕೆ ಆರ್ ಎಂಬವರನ್ನು ಸ್ವಾಗತ ಗಾರ ಕೆಲಸಕ್ಕೆ ನೇಮಿಸಿಕೊಂಡಿದ್ದು, ಆರೋಪಿ ಪುರುಷೋತ್ತಮ ಮುಂಗಡ ಹಣ ಬೇಕು ಎಂದು ಕೇಳಿದ್ದರಿಂದ ದಿನಾಂಕ:28.05.2025 ರಂದು ಹಾಗೂ 31.05.2025 ರಂದು 20,000/- ಹಣವನ್ನು ಪೋನ್ ಪೇ ಮಾಡಿರುತ್ತಾರೆ ಎಂದೂ ದಿನಾಂಕ:06.06.2025 ರಂದು ಬೆಳಿಗ್ಗೆ ಲಾಡ್ಜ್ ಸಿಬ್ಬಂದಿಗೆ ಸಂಬಳ ಕೊಡಬೇಕಾಗಿರುವುದರಿಂದ 1,15,400/- ರೂಪಾಯಿ ಯ ಚೆಕ್ ಅನ್ನು ಡ್ರಾ ಮಾಡಿಕೊಂಡು ಬರಲು ನೀಡಿ ಕಳುಹಿಸಿದ್ದು, ಪೋಸ್ಟ್ ಆಪೀಸಿನಲ್ಲಿ ಹಣ ಡ್ರಾ ಮಾಡಿಕೊಂಡು ಹಣವನ್ನು ಕೇಳಿದಾಗ ಸ್ವಲ್ಪ ದಿನ ಬಿಟ್ಟು ಕೊಡುತ್ತೇನೆಂದು ಹೇಳಿ ಕೆಲಸಕ್ಕೆ ಬಾರದೇ ಇದುವರೆಗೂ ಹಣ ವಾಪಾಸ್ಸು ನೀಡಿರುವುದಿಲ್ಲ ಎನ್ನಲಾಗಿದೆ.
ಆರೋಪಿ ಪುರುಷೋತ್ತಮ ನು ಸಚಿನ್ ಕುಮಾರ್ ರನ್ನು ನಂಬಿಸಿ ಮೋಸ ಮಾಡುವ ಉದ್ದೇಶದಿಂದ ಮುಂಗಡ ಹಣ ಒಟ್ಟು 25,000/- ಹಾಗೂ ಲಾಡ್ಜ್‌ನ ಚೆಕ್ ಹಣ 1,15,400/- ರೂ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 316(4),318(4) BNS ರಂತೆ ಪ್ರಕರಣ ದಾಖಲಾಗಿದೆ.
