ಕಾಪು: ದಿನಾಂಕ:21-09-2025(ಹಾಯ್ ಉಡುಪಿ ನ್ಯೂಸ್) ಶಾಂತಿ ಗಾರ್ಡನ್ ಅಪಾರ್ಟ್ ಮೆಂಟ್ಗೆ ಮಾರಕಾಯುಧ ಹಿಡಿದು ಪ್ರವೇಶಿಸಿದ ರಿಕ್ಷಾ ಚಾಲಕ ನೋರ್ವ ಆತಂಕದ ವಾತಾವರಣ ಸೃಷ್ಟಿ ಸಿದ್ದಾನೆಂದು ನಾರಾಯಣ ಸಾಲಿಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಪು ತಾಲೂಕು,ಪಡುಗ್ರಾಮ ನಿವಾಸಿ ನಾರಾಯಣ ಸಾಲಿಯಾನ್ (51) ಅವರು ವಾಸವಿರುವ ಶಾಂತಿ ಗಾರ್ಡನ್ ಅಪಾರ್ಟಮೆಂಟ್ ಗೆ ದಿನಾಂಕ: 18.09.2025ರಂದು ಮದ್ಯಾಹ್ನ ಸಮಯಕ್ಕೆ ಓರ್ವ ವ್ಯಕ್ತಿ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಹೊರಗಡೆ ನಿಲ್ಲಿಸಿ ಆತನ ಕೈಯಲ್ಲಿ ಬೀಯರ್ ಬಾಟಲ್ ಹಿಡಿದುಕೊಂಡು ರೂಮಿನ ಹೊರಗಡೆ ಬಾ ಎಂದು ಬೊಬ್ಬೆ ಹೊಡೆದು ಸ್ವಲ್ಪ ಸಮಯ ಬಳಿಕ ಅಲ್ಲಿಂದ ಹೊರಟು ಹೋಗಿ ಮತ್ತೆ ಅದೇ ದಿನ ರಾತ್ರಿ ಸಮಯಕ್ಕೆ ಅದೇ ವ್ಯಕ್ತಿ ತನ್ನ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಆಟೋರಿಕ್ಷಾವನ್ನು ಅಕ್ರಮವಾಗಿ ಅಪಾರ್ಟಮೆಂಟ್ ನ ಒಳಗಡೆ ನುಗ್ಗಿಸಿ ಕೈಯಲ್ಲಿ ಬೀಯರ್ ಬಾಟಲ್ ಹಾಗೂ ಇನ್ನೊಂದು ಕೈಯಲ್ಲಿ ಭಯಹುಟ್ಟಿಸುವಂತಹ ಆಯುಧವನ್ನು ಹಿಡಿದುಕೊಂಡು ಅಪಾರ್ಟಮೆಂಟ್ ನ ಮೇಲೆ ಕೆಳಗೆ ಹೋಗುತ್ತಿದ್ದು ನಂತರ ಬೀಯರ್ ಬಾಟಲ್ ನ್ನು ಅಪಾರ್ಟಮೆಂಟ್ ನ “ಎ ವಿಂಗ್ ನಲ್ಲಿನ ರೂಂ ನಂಬ್ರ 105 ನ ಕಿಟಕಿಯ ಹೊರಬದಿಯಲ್ಲಿ ಇರಿಸಿ ದಿನಾಂಕ: 19.09.2025 ಬೆಳಿಗ್ಗೆ 6.30 ಗಂಟೆಗೆ ಅಪಾರ್ಟಮೆಂಟ್ ನ ಕೆಳಗೆ ಸೆಕ್ಯುರಿಟಿ ಗಾರ್ಡ ರೂಮಿಗೆ ಹೋಗಿ ಪುಸ್ತಕದಲ್ಲಿ ಆತನ ಹೆಸರು ರಿತೇಶ್ ಬೋಳಾರ್ ಎಂಬುದಾಗಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಹಿ ಮಾಡಿ ಬಂದ ರಿಕ್ಷಾದಲ್ಲಿ ಹೋಗಿರುವುದು ಕಂಡುಬಂದಿರುತ್ತದೆ ಎಂದು ನಾರಾಯಣ ಸಾಲಿಯಾನ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 329(3), 62 BNS and 25(1-a) Arms Act ರಂತೆ ಪ್ರಕರಣ ದಾಖಲಾಗಿದೆ.
