IMG_20250920_175754.jpg
Spread the love

ಶಿರ್ವಾ: ದಿನಾಂಕ:20-09-2025(ಹಾಯ್ ಉಡುಪಿ ನ್ಯೂಸ್) ಪೊಲೀಸ್ ಡ್ರೆಸ್ ಧರಿಸಿ ವೀಡಿಯೋ ಕಾಲ್ ಮಾಡಿ ಬೆದರಿಸಿದ ವ್ಯಕ್ತಿ ಯೋರ್ವ 4.10 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾನೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಿರ್ವ ನಿವಾಸಿ ಲಿನೆಟ್ ಮೆಂಡೋನ್ಸ (52) ಎಂಬವರು ದಿನಾಂಕ 18/09/2025 ರಂದು ಮಧ್ಯಾಹ್ನ ಹೊತ್ತು ಮನೆಯಲ್ಲಿರುವಾಗ ವಾಟ್ಸ್ ಆಪ್ನಲ್ಲಿ ವಿಡಿಯೋ ಕಾಲ್ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ನಿಮ್ಮ ಮೇಲೆ ಕೇಸು ಇದೆ ನಿಮ್ಮ ನಂಬರ್ ಬ್ಲಾಕ್ ಮಾಡುತ್ತೇವೆ. ನೀವು ಕೂಡಾ ಗೂಂಡಾಗಿರಿಯಲ್ಲಿ ಒಳಗೊಂಡಿದ್ದೀರಿ ಗೂಂಡಾಗಿರಿಯಲ್ಲಿ ಮಾಡಿದ ಹಣ ಕೂಡಾ ನಿಮ್ಮ ಬ್ಯಾಂಕ್ ಖಾತೆಯಲ್ಲಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಾಕುವಂತೆ ಒಂದು ಪಿಡಿಎಪ್ ಪೈಲ್ ಕಳುಹಿಸಿದ್ದು ಆತನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದು ವಿಡಿಯೋ ಕಾಲ್ ಮಾಡಿದ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದನು ಎನ್ನಲಾಗಿದೆ.

ಅಲ್ಲದೆ ವಿಡಿಯೋ ಕಾಲ್ ಕರೆಯನ್ನು ಕಟ್ ಮಾಡಬಾರದು ಬೇರೆ ಯಾರಿಗೂ ಮಾಹಿತಿ ನೀಡಬಾರದು ಎಂದು ತಿಳಿಸಿರುತ್ತಾನೆ. ಲಿನೆಟ್ ಮೆಂಡೋನ್ಸ ತನ್ನ ಖಾತೆಯಲ್ಲಿದ್ದ ಹಣ ಉಳಿಯಬೇಕು ಎಂಬ ಉದ್ದೇಶದಿಂದ ಆತನು ಪೊಲೀಸ್ ಅಧಿಕಾರಿಯೇ ಆಗಿರಬಹುದು ಎಂದು ಭಾವಿಸಿ ಆತನು ತಿಳಿಸಿದಂತೆ ಬ್ಯಾಂಕ್ ಆಫ್ ಬರೋಡ ಹೋಗಿ ತನ್ನ ಖಾತೆಯಲ್ಲಿದ್ದ 4,10,000/- ಹಣವನ್ನು ಆತನು ತಿಳಿಸಿದ ಖಾತೆಗೆ ಆರ್ಟಿಜಿಸ್ ಮಾಡಿರುತ್ತಾರೆ. ಆದರೆ ಹಾಕಿದ ಹಣವನ್ನು ಆತನು ಖಾತೆಗೆ ವಾಪಾಸು ಹಾಕಲಿಲ್ಲ. ವಿಡಿಯೋ ಕಾಲ್ ಮಾಡಿದ ವ್ಯಕ್ತಿಯು ಲಿನೆಟ್ ಮೆಂಡೋನ್ಸ ರನ್ನು ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅವರಿಂದ ಹಣವನ್ನು ತನ್ನ ಖಾತೆಗೆ ಹಾಕಿಸಿದ್ದು ಆತನಿಂದ ವಂಚನೆಗೆ ಒಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ  ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!