ಕಟಪಾಡಿ: ದಿನಾಂಕ:19-09-2025(ಹಾಯ್ ಉಡುಪಿ ನ್ಯೂಸ್) ಕಳೆದ ವರ್ಷ ದಿಂದ ಅಷ್ಟಮಿಯಂದು ಗೊಂಬೆವೇಷ ಧರಿಸಿ ಬಡವರಿಗೆ ಸಹಾಯ ಮಾಡುವ ಸಮಾಜ ಸೇವೆಯ ಕಾರ್ಯವನ್ನು ನಡೆಸುತ್ತಿರುವ ಮಟ್ಟು ಜವನೆರ್ ತಂಡವು ಈ ಬಾರಿಯು ಅಷ್ಟಮಿಯಂದು ಗೊಂಬೆ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಮೊತ್ತವನ್ನು ಎಂಟು ವರ್ಷ ಪ್ರಾಯದ ಬಡ ಕುಟುಂಬದ ಬಾಲಕಿಯೋರ್ವಳ ಕಾಲಿನ ಶಸ್ತ್ರ ಚಿಕಿತ್ಸೆಗೆಂದು ಅರವತ್ತು ಸಾವಿರ ರೂಪಾಯಿಗಳನ್ನು ಹಸ್ತಾಂತರಿಸಿದ್ದಾರೆ.
ಕಟಪಾಡಿ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಸಹಾಯ ಧನವನ್ನು ಮಗುವಿಗೆ ಹಸ್ತಾಂತರಿಸಿ ಯುವಕರ ಸಮಾಜ ಸೇವೆ ಎಲ್ಲರಿಗೂ ಮಾದರಿ ಎಂದರು. ಮಟ್ಟು ಜವನೆರ್ ತಂಡದ ಸುಜಿತ್, ಮನೋಜ್, ಧನುಷ್, ಲಿಖಿತ್, ದ್ರಿಶ್ಯ, ವರ್ಶಿತ್, ಪ್ರವೀಣ್ ಅವರು ಉಪಸ್ಥಿತರಿದ್ದರು. ಬಡ ಕುಟುಂಬದ ಯೋಗ್ಯ ಫಲಾನುಭವಿ ಮಗುವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಮಾಜ ಸೇವಕ ಪ್ರಕಾಶ್ ಪೂಜಾರಿ ಕಾಡುಬೆಟ್ಟು ಅವರು ನಿರ್ವಹಿಸಿದ್ದರು.

