ಮಣಿಪಾಲ: ದಿನಾಂಕ:19-09-2025 ( ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಶೈಕ್ಷಣಿಕ ಸಂಸ್ಥೆಯೊಂದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿ ಮೂಡುಬೆಟ್ಟು ನಿವಾಸಿ ರಾಜ್ ಗಿರೀಶ (17), ಎಂಬವರು ಶಿವಳ್ಳಿ ಗ್ರಾಮದ ಮಣಿಪಾಲದಲ್ಲಿರುವ WGSHA ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ದಿನಾಂಕ 18/09/2025 ರಂದು ಬೆಳಿಗ್ಗೆ ತರಗತಿಯಲ್ಲಿರುವಾಗ ರಾಜ್ ವೀರ್ ಸಿಂಗ್ ಮತ್ತು ವಿಕ್ರಮ್ ವೀರ್ ಸಿಂಗ್ ಎಂಬುವವರು ರಾಜ್ ಗಿರೀಶ್ ರಿಗೆ ಮಾದ್ರಚೋದ್ ಎಂದು ಅವಾಚ್ಯವಾಗಿ ಬೈದಿದ್ದು ನಂತರ ಮಧ್ಯಾಹ್ನ ಊಟಕ್ಕೆ ರಾಜ್ ಗಿರೀಶ್ ತಮ್ಮ ಸ್ನೇಹಿತ ಸ್ವಾತಿಕ್ ಕೆ ರವರ ಜೊತೆ ಕಾಲೇಜಿನಿಂದ ಹೊರಗೆ ಬಂದು ಕಾಲೇಜಿನ ಬಳಿ ನಿಲ್ಲಿಸಿದ್ದ ತಮ್ಮ ಸ್ಕೂಟಿಯ ಬಳಿ ಬಂದಾಗ ರಾಜ್‌ವೀರ್ ಸಿಂಗ್ , ವಿಕ್ರಮ್ ವೀರ ಸಿಂಗ್ ಹಾಗೂ ಅದೇ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶ್ ಇವರು ಬಂದು ರಾಜ್ ಗಿರೀಶ್ ರ ಸ್ಕೂಟಿಯ ಕೀಯನ್ನು ರಾಜ್ ವೀರ ಸಿಂಗ್ ಎಂಬುವವನು ಎಳೆದು ತೆಗೆದು ಬೈದಿರುತ್ತಾನೆ .
ನಂತರ ರಾಜ್ ಗಿರೀಶ್ ಅಲ್ಲಿಂದ ಹೊರಟಾಗ ಅವರ ಸ್ಕೂಟರನ್ನು ಅಡ್ಡಗಟ್ಟಿ 3 ಜನ ಆರೋಪಿಗಳು ಸೇರಿ ಸ್ವಾತಿಕ್ ರವರನ್ನು ಕೊಲ್ಲುವ ಉದ್ದೇಶದಿಂದ ಕೈಕಾಲು ಭುಜಕ್ಕೆ ಹಲ್ಲೆ ಮಾಡಿ ನೆಲಕ್ಕೆ ದೂಡಿ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಪರಿಣಾಮ ಸ್ವಾತಿಕ್ ಕೆ ರವರ ಎಡ ಕೈ ಭುಜದ ಮೂಳೆ ಮುರಿತವಾಗಿ ಇದರಿಂದ ಆತನಿಗೆ ಕೈ ಎತ್ತಲಾಗದೆ ಮಾರಾಣಾಂತಿಕ ಗಾಯವಾಗಿರುವುದಾಗಿ ರಾಜ್ ಗಿರೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 126(2), 352,351(3)117(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.
