images-3.jpeg
Spread the love

ಕುಂದಾಪುರ: ದಿನಾಂಕ:16-09-2025(ಹಾಯ್ ಉಡುಪಿ ನ್ಯೂಸ್) ಕೇರಳ ರಾಜ್ಯದ ಕ್ಯಾಲಿಕಟ್ ಗೆ ಮೀನು ಲೋಡನ್ನು ವಾಹನದಲ್ಲಿ ಸಾಗಿಸುವಾಗ ಸೇಲಂನಲ್ಲಿ  ಐದು ಜನ ದರೋಡೆ ಕೋರರು ವಾಹನ ಚಾಲಕನನ್ನು ಗಾಯಗೊಳಿಸಿ ಬೆದರಿಸಿ ಲೂಟಿ ಮಾಡಿದ್ದಾರೆ ಎಂದು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ರಾಜ್ಯ ವಾಲಗಾಟ್ ನಿವಾಸಿ ಬಶೀರ್ (35) ಎಂಬವರು KA-20-D-7988 ಇನ್ಸೂಲೇಟರ್‌ ವಾಹನದ ಚಾಲಕರೆಂದು ಹೇಳಿಕೊಂಡಿದ್ದು, ದಿನಾಂಕ 02/07/2024 ರಂದು ಸಂಜೆ  ಚೆನೈನ ಪುಲಿಕಾಟ್‌ ಎಂಬಲ್ಲಿಂದ ಮೀನನ್ನು ಲೋಡ್‌ ಮಾಡಿಕೊಂಡು ಕೇರಳದ ಕಾಲಿಕಟ್‌ ಗೆ ಹೊರಟಿದ್ದು ದಾರಿ ಮಧ್ಯ ಸೇಲಂ ನ ಉಳನ್ದೂರು ಎಂಬಲ್ಲಿ ಬರುವಾಗ 3 ಮೋಟಾರ್‌ ಸೈಕಲಿನಲ್ಲಿ 5 ಜನ ವ್ಯಕ್ತಿಗಳು ಬಶೀರ್ ರವರ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಇನ್ಸೂಲೇಟರ್‌ ವಾಹನವನ್ನು ನಿಲ್ಲಿಸಿ ವಾಹನದೊಳಗೆ ಬಂದು ಓರ್ವನು ಬಶೀರ್ ರವರ ಕೆನ್ನೆಗೆ ಹೊಡೆದು ಇನ್ನೊಬ್ಬನು ಚೂರಿಯಿಂದ ಬಶೀರ್ ರವರ ಹಣೆಯ ಬಲಬಾಗಕ್ಕೆ ಚೂರಿಯಿಂದ ತಾಗಿಸಿ ರಕ್ತ ಬರುವಂತೆ ಗಾಯ ಉಂಟು ಮಾಡಿದ್ದು  ಬಶೀರ್ ರವರು ಸ್ವಲ್ಪ ಮುಂದೆ ವಾಹನ ಚಲಾಯಿಸಿಕೊಂಡು ಹೋದಾಗ ಅಲ್ಲಿ ಆರೋಪಿತರೆಲ್ಲರೂ ಸೇರಿಕೊಂಡು ಬಶೀರ್ ರವರಲ್ಲಿ ಹಣ ನೀಡುವಂತೆ ಹೇಳಿ ಮೀನಿನ ಪಾರ್ಟಿಯವರಿಂದ 10,000/- ರೂಪಾಯಿ ಹಣವನ್ನು ಹಾಕಿಸಿದ್ದು ಅಲ್ಲದೇ ಪಿರ್ಯಾದಿದಾರರ ಬಳಿಯಿದ್ದ ನಗದು 15,000/- ರೂಪಾಯಿ ತೆಗೆದುಕೊಂಡು ಮತ್ತು1,200/- ರೂಪಾಯಿ ಗೂಗಲ್‌ ಪೇ ಮಾಡಿಸಿಕೊಂಡಿದ್ದಾರೆ .ಅಲ್ಲದೇ ಜೀವ ಬೆದರಿಕೆ ಹಾಕಿದ್ದು, ಬಶೀರ್ ರವರು ಹೆದರಿ ವಾಹನವನ್ನು ಕೇರಳ ಮಲಪ್ಪುರಂ ನ ಮಂಜೇರಿಯಲ್ಲಿ ಇಟ್ಟು ರೈಲಿನ ಮೂಲಕ ಕುಂದಾಪುರಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಶೀರ್ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 126 (2), 115 (2), 118 (1), 351 (3), 310 (2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!