images-2.jpeg
Spread the love
  • ಬ್ರಹ್ಮಾವರ: ದಿನಾಂಕ :15/09/2025 (ಹಾಯ್ ಉಡುಪಿ ನ್ಯೂಸ್) ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ  ಇಸ್ಪೀಟ್ ಜುಗಾರಿ ನಡೆಯುತ್ತಿದ್ದ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸದಾನಂದ ನಾಯ್ಕ ಹಾಗೂ ಠಾಣೆಯ ಪೊಲೀಸರು ದಾಳಿ ನಡೆಸಿ ಐದು ಜನರನ್ನು ಬಂಧಿಸಿದ್ದಾರೆ.
  • ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್  ಸದಾನಂದ ನಾಯ್ಕ ಅವರಿಗೆ ದಿನಾಂಕ:14-09-2025 ರಂದು ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ  ಬಂದ ಮಾಹಿತಿಯ ಮೇರೆಗೆ ಮೇಲಾಧಿಕಾರಿಯವರ ಅನುಮತಿ ಪಡೆದು ಠಾಣಾ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ .
  • ಪೊಲೀಸರು ದಾಳಿ ನಡೆಸಿದಾಗ ಒಬ್ಬಾತನು ಓಡಿಹೋಗಿದ್ದು ಇಸ್ಪೀಟು ಜುಗಾರಿ ಆಡುತ್ತಿದ್ದ 1. ಶರೀಫ್‌ ನಧಾಪ್‌ (36),2) ರವಿ (30),3) ಯಮನೂರ (45), 4)ಕಾಳಿಂಗಪ್ಪ (26), 5) ಶರಣಪ್ಪ (37) ಎಂಬವರನ್ನು ಪೊಲೀಸರು ಹಿಡಿದು ಅಂದರ್‌ ಬಾಹರ್‌ ಇಸ್ಫಿಟ್ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 1800/-, ಇಸ್ಪೀಟು ಎಲೆಗಳು , ಮೊಬೈಲ್‌ ಪೋನ್‌ ಗಳು -5, KA-20-U-325̧3, KA-20-R-6349̧, KA-20-HE-4707̧, KA-20-EK-0891 ನೇ ನಂಬ್ರದ ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
  • ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.
error: No Copying!