IMG-20250914-WA0057.jpg
Spread the love

ಕಾರ್ಕಳ: ದಿನಾಂಕ:14-09-2025(ಹಾಯ್ ಉಡುಪಿ ನ್ಯೂಸ್) ಮೆದುಳಿನ ಕ್ಯಾನ್ಸರ್ ಕಾಯಿಲೆ ಇದ್ದ ಹುಡುಗಿಯನ್ನು ಕಾಯಿಲೆ ಬಗ್ಗೆ ತಿಳಿಸದೆ ಮದುವೆ ಮಾಡಿ ಕೊಟ್ಟು  ಆಕೆ ಮ್ರತಪಟ್ಟ ನಂತರ ಚಿನ್ನಾಭರಣ ವಾಪಾಸು ನೀಡದೆ ವಂಚಿಸಿದ್ದಾರೆ ಎಂದು ಮ್ರತ ಪಟ್ಟ ಯುವತಿಯ ಗಂಡ ತನ್ನ ಅತ್ತೆ,ಮಾವನ ಮನೆಯವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ನಿವಾಸಿ ಚೇತನ್ ಎಂಬವರು  ಕರುಣಾಕರ ಹೆಗ್ಡೆ ಎಂಬವರ ಮಗಳಾದ ವಿನಿತಾ ಎಂಬವರನ್ನು ದಿನಾಂಕ 21/12/2018 ರಂದು ಮದುವೆ ಆಗಿದ್ದು ಮದುವೆಯಾಗುವ ಸಮಯ ಚೇತನ್ ಅವರು ತನ್ನ ಹೆಂಡತಿಗೆ ಕೆಲವು ಚಿನ್ನದ ಆಭರಣಗಳನ್ನು  ನೀಡಿರುತ್ತಾರೆ ಎಂದಿದ್ದಾರೆ .

ಮದುವೆಯಾದ ನಂತರ ಉದ್ಯೋಗದ ಸಂಬಂಧ ಬೆಂಗಳೂರಿನಲ್ಲಿ ವಾಸವಿದ್ದು ದಿನಾಂಕ  29/12/2022 ರಂದು ಗಂಡು ಮಗು ಜನಿಸಿರುತ್ತದೆ ಎಂದೂ, ಮದುವೆಯಾಗುವ ಮೊದಲೇ ವಿನಿತಾರವರಿಗೆ ಕಣ್ಣಿನ ಸಮಸ್ಯೆ ಇದ್ದು  ಚಿಕಿತ್ಸೆ ಮಾಡಿಸಿದರೂ  ಬಲಕಣ್ಣಿನ  ದೃಷ್ಟಿ ಕಳೆದುಕೊಂಡಿದ್ದು , ಅವರಿಗೆ ಮೆದುಳಿನ ಕ್ಯಾನ್ಸರ್ ಇರುವುದು ತಿಳಿದುಬಂದಿರುತ್ತದೆ . ವಿನಿತಾರವರಿಗೆ  ಮದುವೆಯಾಗುವ ಮೊದಲೇ  ಆರೋಗ್ಯದ ಸಮಸ್ಯೆ ಇರುವ ವಿಚಾರ ಹೆತ್ತವರಿಗೆ  ತಿಳಿದಿದ್ದರೂ ಮೋಸದಿಂದ ಚೇತನ್ ರವರಿಗೆ ಮದುವೆ ಮಾಡಿರುತ್ತಾರೆ.

ಚೇತನ್ ರವರು ತನ್ನ ಹೆಂಡತಿಗೆ ಚಿಕಿತ್ಸೆ ಕೊಡಿಸಿದರೂ ವಿನಿತಾರವರು ದಿನಾಂಕ 18/12/2023  ರಂದು ಮೃತಪಟ್ಟಿದ್ದು, ಮೃತ ವಿನಿತಾರವರ ಬಂಗಾರದ  ಆಭರಣಗಳು ಮತ್ತು  ಮೊಬೈಲ್ ಫೋನನ್ನು  ನಂತರ  ವಾಪಾಸು ಕೊಡುವುದಾಗಿ ತಿಳಿಸಿ, ಚೇತನ್ ರವರ  ತಾಯಿಯಿಂದ ಬಂಗಾರದ  ಆಭರಣಗಳನ್ನು  ಮತ್ತು ಮೊಬೈಲ್ ಫೋನನ್ನು ಪಡೆದುಕೊಂಡು ನಂತರ ವಾಪಾಸು ಕೊಡದೇ ನಂಬಿಕೆ ದ್ರೋಹವನ್ನುಂಟು ಮಾಡಿರುತ್ತಾರೆ. ಅಪಾದಿತರಾದ 1) ಶ್ರೀ ಕರುಣಾಕರ ಹೆಗ್ಡೆ, 2) ಶ್ರೀಮತಿ ವಿನೋದ 3) ಶ್ರೀಮತಿ ಕವಿತಾ ಹೆಗ್ಡೆ, 4) ಶ್ರೀಮತಿ ಅಮಿತಾ ಹೆಗ್ಡೆ, 5) ವಿಶ್ವನಾಥ ಹೆಗ್ಡೆ ಇವರು ಚೇತನ್ ರವರಿಗೆ ಮೋಸ ಮಾಡುವ ಉದ್ದೇಶದಿಂದ ಅವರ ಮಗಳಿಗೆ ಇದ್ದ ಕಾಯಿಲೆಯ ವಿಚಾರವನ್ನು ಮರೆಮಾಚಿದ್ದಲ್ಲದೆ, ಚೇತನ್ ರವರು ಅವರ ಹೆಂಡತಿಗೆ ಮದುವೆ ಸಮಯ ಕೊಟ್ಟಿದ್ದ  ಚಿನ್ನಾಭರಣವನ್ನು ಮತ್ತು ಮೊಬೈಲ್‌ ಫೋನನ್ನು  ವಾಪಾಸು ಕೊಡದೇ ನಂಬಿಕೆ ದ್ರೋಹವನ್ನುಂಟು ಮಾಡಿರುತ್ತಾರೆ ಎಂದು ಚೇತನ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 314, 315, 316, 318 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!