IMG-20250915-WA0056.jpg
Spread the love

ಬೈಂದೂರು: ದಿನಾಂಕ:15-09-2025(ಹಾಯ್ ಉಡುಪಿ ನ್ಯೂಸ್) ದೇವರಗದ್ದೆಯಲ್ಲಿರುವ ರಬ್ಬರ್ ತೋಟವೊಂದರಲ್ಲಿ ಟ್ಯಾಪಿಂಗ್ ಕೆಲಸ ಮಾಡಿ ಕೊಂಡಿದ್ದ  ಇಬ್ಬರು ಕೆಲಸಗಾರರು ಕೆಲಸದ ವಿಷಯದಲ್ಲಿ ಹೊಡೆದಾಡಿಕೊಂಡು ಅವರಲ್ಲಿ ಒಬ್ಬನ ಕೊಲೆ ಯಾಗಿದೆ ಎಂದು ರಬ್ಬರ್ ತೋಟದ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಂದೂರು ತಾಲೂಕು ಯಡ್ತರೆ ಗ್ರಾಮದ ನಿವಾಸಿ ಥೋಮಸ್ (66) ಎಂಬವರು  ಅಡಿಕೆ ಮತ್ತು ರಬ್ಬರ್‌  ಕೃಷಿ ಮಾಡಿಕೊಂಡಿದ್ದು  ಸುಮಾರು  2  ವರ್ಷದಿಂದ  ಕೇರಳದ  ಬಿನು ಪಿಲಿಫ್‌  ( 45)  ಮತ್ತು  ಉದಯ ಕುಮಾರ್‌   (42) ಇವರು  ದೇವರಗದ್ದೆಯಲಿರುವ ಥೋಮಸ್ ರವರ ರಬ್ಬರ್‌ ಕೃಷಿಯ ತೋಟದಲ್ಲಿ ಟ್ಯಾಪಿಂಗ್‌ ಕೆಲಸ ಮಾಡಿಕೊಂಡಿದ್ದು ರಬ್ಬರ್  ತೋಟದಲ್ಲಿರುವ  ಶೆಡ್‌ನಲ್ಲಿ  ಇವರಿಬ್ಬರು   ಒಟ್ಟಿಗೆ   ವಾಸವಾಗಿರುತ್ತಾರೆ ಎಂದಿದ್ದಾರೆ .

ಥೋಮಸ್ ರವರ  ತೋಟದಲ್ಲಿ ರಬ್ಬರ್‌  ಟ್ಯಾಪಿಂಗ್‌ ಕೆಲಸ ಮಾಡಿಕೊಂಡಿದ್ದ ಬಿನು ಫಿಲೀಪ್‌  ಮತ್ತು ಉದಯ ಕುಮಾರ್‌ ರವರು  ರಬ್ಬರ್‌ ಟ್ಯಾಪಿಂಗ್‌  ಮಾಡುವ  ಕೂಲಿ  ಹಣದ  ವಿಚಾರದಲ್ಲಿ ಅವಾಗಾವಾಗ  ಗಲಾಟೆ ಮಾಡಿಕೊಳ್ಳುತ್ತಿದ್ದು. ಉದಯನು  ಯಾವಾಗಲೂ  ನಾನೊಬ್ಬನೇ   ಇಲ್ಲಿ ಟ್ಯಾಪಿಂಗ್‌   ಕೆಲಸ ಮಾಡುತ್ತೇನೆ.  ನೀ  ಕೆಲಸ ಬಿಟ್ಟು ಹೋಗು  ಎಂದು   ಬಿನು ಪಿಲಿಫ್‌ ಗೆ  ಕೇಳಿಕೊಂಡಿದ್ದ   ಥೋಮಸ್ ರವರು  ಇವರಿಬ್ಬರಿಗೆ  ಹಲವಾರು  ಭಾರಿ  ಬುದ್ದಿವಾದ  ಹೇಳಿ  ಒಟ್ಟಿಗೆ  ಕೆಲಸ ಮಾಡಿಕೊಂಡಿರಿ  ಎಂದು ತಿಳಿ ಹೇಳಿರುತ್ತಾರೆ.   ದಿನಾಂಕ  13.09.2025  ರಂದು ರಾತ್ರಿ  ಸುಮಾರು  12 ಗಂಟೆ  ಹೊತ್ತಿಗೆ  ಥೋಮಸ್ ರವರು ಮನೆಯಲ್ಲಿ  ಮಲಗಿಕೊಂಡಿದ್ದಾಗ   ತಾಯಿಯ  ಮನೆಗೆ  ಹೋಗಿದ್ದ  ಥೋಮಸ್ ರವರ   ಸೊಸೆ  ರಂಜಿನಿ ಯು   ಥೋಮಸ್ ರವರ  ಮಗ   ನವೀನ್‌  ಗೆ    ಪೋನ್‌ ಮಾಡಿ ದೇವರಗದ್ದೆಯಲ್ಲಿರುವ   ಥೋಮಸ್ ರವರ ರಬ್ಬರ್‌ ತೋಟದ  ಶೆಡ್‌ನಲ್ಲಿ   ಜೋರಾಗಿ ಬೈದಾಡಿಕೊಂಡು  ಗಲಾಟೆ ಮಾಡಿಕೊಳ್ಳುತ್ತಿರುವ  ವಿಚಾರವನ್ನು   ತಿಳಿಸಿರುತ್ತಾರೆ.   ಥೋಮಸ್ ರವರು ಮತ್ತು ಮಗ ನವೀನ್‌   ಬೈಕ್‌ನಲ್ಲಿ   ದೇವರಗದ್ದೆಯ   ಶೆಡ್‌ಗೆ  ದಿನಾಂಕ: 14.09.2025  ರಂದು  1  ಗಂಟೆ ಸುಮಾರಿಗೆ ಹೋದಾಗ  ಶೆಡ್‌ನ  ಹೊರಗಡೆ  ಉದಯ ಮತ್ತು ಬಿನು  ಪಿಲಿಫ್‌  ಒಬ್ಬರನ್ನೊಬ್ಬರು ದೂಡಾಡಿಕೊಳ್ಳುತ್ತಾ ಹೊಡೆದಾಡಿಕೊಳ್ಳುತ್ತಿದ್ದುದು  ಶೆಡ್‌ನಲ್ಲಿದ್ದ ಲೈಟಿನಲ್ಲಿ  ಕಂಡುಬಂದಿರುತ್ತದೆ. ಥೋಮಸ್ ರವರು  ಮತ್ತು ಅವರ  ಮಗ  ಬೈಕ್‌  ಇಳಿದು  ಟಾರ್ಚ್‌  ಹಾಕಿಕೊಂಡು   ಶೆಡ್‌ನ  ಬಳಿ  ಹೋಗುವಾಗ  ಅವರನ್ನು ನೋಡಿ  ಉದಯನು   ಆತನ  ಕೈಯಲ್ಲಿದ್ದ   ರಬ್ಬರ್‌  ಟ್ಯಾಪಿಂಗ್‌   ಕತ್ತಿಯಿಂದ  ಬೀನು  ಪಿಲೀಫ್‌ನ   ಹೊಟ್ಟೆಯ  ಭಾಗಕ್ಕೆ  ಇರಿದು  ಓಡಿ ಹೋಗಿರುತ್ತಾನೆ.    ಥೋಮಸ್ ರವರು ಮತ್ತು ನವೀನ್‌  ಕೂಡಲೇ  ಈ  ವಿಚಾರ ವನ್ನು  ಲಿಮೋರವರಿಗೆ   ತಿಳಿಸಿ    ಅಂಬುಲೆನ್ಸ್‌  ತರಿಸಿ    ಗಾಯಗೊಂಡು ಪ್ರಜ್ಞೆ  ತಪ್ಪಿ ಬಿದ್ದಿದ್ದ  ಬಿನು ಪಿಲೀಪ್‌ನನ್ನು  ಬೈಂದೂರು  ಸರಕಾರಿ ಆಸ್ವತ್ರೆಗೆ  ಕರೆದುಕೊಂಡು  ಬಂದಿದ್ದು. ವೈದ್ಯರು ಪರೀಕ್ಷಿಸಿ  ಈ ದಿನ  ದಿನಾಂಕ 14.09.2025  ರಂದು  ಬೆಳಿಗ್ಗೆ  6  ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಉದಯನು   ರಬ್ಬರ್‌  ಟ್ಯಾಪಿಂಗ್‌   ತಾನೊಬ್ಬನೇ  ಮಾಡಿಕೊಂಡು   ಅದರಿಂದ   ಹೆಚ್ಚು ಸಂಪಾದನೆ   ಮಾಡುವ   ಉದ್ದೇಶದಿಂದ   ತನ್ನೊಂದಿಗೆ  ಕೆಲಸ ಮಾಡುವ   ಬಿನು  ಪಿಲಿಪ್‌ ಗೆ  ಕೆಲಸ ಬಿಟ್ಟು  ಹೋಗುವಂತೆ   ಹೇಳಿ  ಗಲಾಟೆ ಮಾಡಿದ್ದು  ಆತನನ್ನು  ಕೊಲೆ ಮಾಡುವ ಉದ್ದೇಶದಿಂದ  ರಬ್ಬರ್‌  ಟ್ಯಾಪಿಂಗ್‌ ಮಾಡುವ  ಕತ್ತಿಯಿಂದ  ಆತನಿಗೆ  ಇರಿದು  ಈ ಕೊಲೆ ಮಾಡಿದ್ದಾನೆ ಎಂದು ಥೋಮಸ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 103(1) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!